
ದೊಡ್ಡಬಳ್ಳಾಪುರ: ಕಾನೂನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ಸಮಾಜಕ್ಕೆ ಸ್ಫೂರ್ತಿ ಎಂದು ಕರವೇ (ಪ್ರವೀಣ್ ಶೆಟ್ಟಿ) ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಹೇಳಿದರು.
ನಗರದ ಹೊರವಲಯದ ಪಿಎಸ್‍ಐ ಜಗದೀಶ್ ವೃತ್ತದಲ್ಲಿ ಬುಧವಾರ ಹುತಾತ್ಮ ಜಗದೀಶ್ ಅಭಿಮಾನಿ ಬಳಗದಿಂದ ನಡೆದ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಗಲಭೆಗಳು ಸೃಷ್ಟಿಯಾದಾಗ ಪೊಲೀಸರು ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ರಕ್ಷಣೆಗೆ ನಿಲ್ಲುತ್ತಾರೆ. ಹಬ್ಬ ಹರಿದಿನ ಎನ್ನದೆ ಕರ್ತವ್ಯ ಪಾಲನೆಗೆ ನಿಲ್ಲುತ್ತಾರೆ. ಇಂತಹ ಅಧಿಕಾರಿಗಳನ್ನು ಸಾರ್ವಜನಿಕರು ನೆನೆಯಬೇಕು. ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡಬೇಕು‘ ಎಂದರು.
ಡಿವೈಎಸ್ಪಿ ಟಿ.ರಂಗಪ್ಪ, ತಹಶಿಲ್ದಾರ್ ಟಿ.ಎಸ್.ಶಿವರಾಜ್, ನಗರಸಭೆ ಪೌರಾಯುಕ್ತ ರಮೇಶ್.ಎಸ್ ಸುಣಗಾರ್ ಮಾತನಾಡಿ, ಪ್ರತಿ ವರ್ಷ ಇದೇ ಸ್ಥಳದಲ್ಲಿ ಕಾರ್ಯಕ್ರಮಗಳನ್ನು ಅಯೋಜಿಸಿ ಹುತಾತ್ಮ ಜಗದೀಶ್ ಅವರನ್ನು ಸಾರ್ವಜನಿಕರು ಹಾಗೂ ಸಂಘಟನೆ ನೆನಯುತ್ತಾ, ಜಗದೀಶ್ ಕುಟುಂಬದ ಜೊತೆ ಹಾಗೂ ಪೊಲೀಸ್ ಇಲಾಖೆ ಯಾವಾಗಲೂ ಕೈ ಜೋಡಿಸುತ್ತವೆ ಎಂದು ಸಾರುತ್ತಿದ್ದಾರೆ.
ಜಗದೀಶ್ ಮಕ್ಕಳ ಉಜ್ವಲವಾಗಿ ಬೆಳೆಯಲಿ, ಈ ವೃತ್ತಕ್ಕೆ ಪ್ರಾಮಾಣಿಕ ಪೊಲೀಸ್ ಅಧಿಕಾರಿ ತನ್ನ ಸೇವೆಗಾಗಿ ಪ್ರಾಣ ತೆತ್ತ ಒಬ್ಬ ಅಧಿಕಾರಿಯ ಹೆಸರನ್ನು ಇಟ್ಟಿರುವುದು ತುಂಬಾ ಹೆಮ್ಮೆಯ ಸಂಗತಿ, ಈ ವೃತ್ತವು ಒಬ್ಬ ಸರ್ಕಾರಿ ಅಧಿಕಾರಿಯ ಕಾರ್ಯನಿಷ್ಠೆ ಮತ್ತು ಅವರ ಕ್ಷಮತೆಯ ಗುರುತಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುಂಬಾ ಜಾಗರೂಕರಾಗಿ ಕೆಲಸ ನಿರ್ವಹಿಸಬೇಕು ಸಮಾಜದ ಒಳಿತಿಗಾಗಿ ಎದೆಗುಂದದೆ ಕಾರ್ಯನಿರ್ವಹಿಸಬೇಕು ಎಂದರು.
ಇದೇ ವೇಳೆ ನೂತನವಾಗಿ ಬಡ್ತಿ ಪಡೆದ ಪೊಲೀಸ್ ಅಧಿಕಾರಿಗಳಾದ ಶಿವರಾಜ್, ಬಿ.ಆರ್.ರಂಗಶಾಮಯ್ಯ,ಸುನೀಲ್ ಗೋತ್ರಾಳೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ಡಿ.ಮಂಜುನಾಥ್, ಎಸ್. ಸೋಮಶೇಖರ್, ವಿ.ಗಜೇಂದ್ರ, ಮುಖಂಡರಾದ ದೀರಜ್ ಮುನಿರಾಜು,ರೈಲ್ವೇಸ್ಟೇಷನ್ ಮಲ್ಲೇಶ್, ಪಿಎಸ್ಐ ಜಗದೀಶ್ ಕುಟುಂಬದ ಸದಸ್ಯರು, ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

