ದೊಡ್ಡಬಳ್ಳಾಪುರ: ಶನಿವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಶ್ರೀ ದೇವರಾಜ ಅರಸ್ ಪದವಿ ಪೂರ್ವ ಕಾಲೇಜಿಗೆ ಶೇ.91.67 ರಷ್ಟು ಫಲಿತಾಂಶ ಲಭಿಸಿದೆ.
ಕಾಲೇಜಿನ ವಿಜ್ಞಾನ ವಿಭಾಗದ ಪಿಸಿಎಂಬಿ ಘಟಕದಲ್ಲಿ ಶೇ.92.75 ಫಲಿತಾಂಶ ದೊರೆತಿದ್ದು, ಪಿಸಿಎಂಸಿಎಸ್ ಘಟಕದಲ್ಲಿ ಶೇ.88.89, ವಾಣಿಜ್ಯ ವಿಭಾಗದಲ್ಲಿ ಶೇ.91.66 ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಪರೀಕ್ಷೆ ಬರೆದ 156 ವಿದ್ಯಾರ್ಥಿಗಳಲ್ಲಿ 31 ಡಿಸ್ಟಿಂಕ್ಷನ್, 67 ಪ್ರಥಮ, 31 ದ್ವಿತೀಯ ಹಾಗೂ 14 ತೃತೀಯ ಶ್ರೇಣಿ ಫಲಿತಾಂಶ ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ ಸ್ಪೂರ್ತಿಗೆ 588 ಅಂಕ: ವಿಜ್ಞಾನ ವಿಭಾಗದಲ್ಲಿ ಎಸ್.ಸ್ಪೂರ್ತಿ 588, ಅಂಕಗಳನ್ನು ಪಡೆದಿದ್ದು, ರಾಜ್ಯದಲ್ಲಿ 11 ನೇ ಸ್ಥಾನ ಪಡೆದಿದ್ದಾರೆ. ಈಕೆಗೆ ರಸಾಯನ ಶಾಸ್ತ್ರ, ಗಣಿತದಲ್ಲಿ 100ಕ್ಕೆ 100 ಅಂಕ ಲಭಿಸಿದೆ.
ಎಸ್.ಜಸ್ವಂತ್ 586 ಅಂಕ ಗಳಿಸಿದ್ದು, ಭೌತಶಾಸ್ತ್ರ, ಗಣಿತದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. ಅದೇ ರೀತಿ ಎನ್.ಐಶ್ವರ್ಯ 583 (ಗಣಕ ವಿಜ್ಞಾನ 100), ಡಿ.ಯಶಸ್ವಿನಿ 581 (ರಸಾಯನಶಾಸ್ತ್ರ 100) ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಎನ್.ಜಿ.ಜಾಹ್ನವಿ 582 ಅಂಕ ಪಡೆದು ಅಗ್ರ ಶ್ರೇಯಾಂಕ ಹೊಂದಿದ್ದರೆ ದಿವ್ಯಲಕ್ಷ್ಮಿ 579(ಅರ್ಥಶಾಸ್ತ್ರ, ಕಂಪ್ಯೂಟರ್ ವಿಜ್ಞಾನದಲ್ಲಿ 100ಕ್ಕೆ 100) ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ.
ಉತ್ತಮ ಅಂಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಸ್‌ಡಿಯುಇಟಿ ಅಧ್ಯಕ್ಷ ಜಿ.ಎಚ್.ನಾಗರಾಜ, ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಹನುಮಂತರಾಜು, ಪ್ರಾಂಶುಪಾಲರಾದ ಮಹಂತೇಶಪ್ಪ, ಆಡಳಿತ ಹಾಗೂ ಬೋಧಕ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

