ದೊಡ್ಡಬಳ್ಳಾಪುರ: ಕರೀಗೌಡ, ಮಂಜುನಾಥ್ ಗೌಡರ ಹಿಂದೆ ಹೋಗುವ ಮುಖಂಡರಿಂದ ಮುನೇಗೌಡ ಜೆಡಿಎಸ್ ಕಾರ್ಯಕರ್ತರಿಗೆ ದೂರ..!!

ದೊಡ್ಡಬಳ್ಳಾಪುರ: ಕರೀಗೌಡ, ಮಂಜುನಾಥ್ ಗೌಡರ ಹಿಂದೆ ಹೋಗುವ ಮುಖಂಡರ ಮಾತು ನಂಬಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ತಾಲೂಕಿನ ಜೆಡಿಎಸ್ ಕಾರ್ಯಕರ್ತರಿಂದ ದೂರವಾಗುತ್ತಿದ್ದಾರೆಂದು ನಗರಸಭೆ ನಾಮಿನಿ ಸದಸ್ಯ ನಾಗರಾಜ್ ಆರೋಪಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಜೆಡಿಎಸ್ ಸಮಾನ ಮನಸ್ಕರ ವೇದಿಕೆಯ, ಆರೋಪಗಳಿಗೆ ಉತ್ತರಿಸುವ ಸಲುವಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಆಂಜನಗೌಡ ಎಂಬ ವಿಷಬೀಜ ಹುಟ್ಟಿಕೊಂಡಿದ್ದು, ಕಾಂಗ್ರೆಸ್ ಪಕ್ಷದೊಂದಿಗೆ ಮಾತುಕತೆ ನಡೆಸಿ, ಜೆಡಿಎಸ್ ಪಕ್ಷವನ್ನು ಮುಗಿಸಲು ಶಡ್ಯಂತ್ರ ನಡೆಸುತ್ತಿದ್ದಾರೆ. ಇದು ಜೆಡಿಎಸ್ ಕಾರ್ಯಕರ್ತರಿಗೆ ತಿಳಿದಿಲ್ಲ ಎಂದು ಆರೋಪಿಸಿದರು‌. ಮುನೇಗೌಡರನ್ನು ನಾವು ಬೆಂಬಲಿಸುತ್ತಿದ್ದೇವೆ ಆದರೆ. ಮುನೇಗೌಡರನ್ನ ನಮ್ಮಿಂದ ದೂರಾಗಲು ಈ ಆಂಜನಗೌಡ ಕಾರಣ. ನಿಮ್ಮ ಕಾಂಗ್ರೆಸ್ ಚಿಂತನೆಯಿಂದ ಕಾಂಗ್ರೆಸ್ ನೊಂದಿಗೆ ಕೈಜೊಡಿಸಿ, ಜೆಡಿಎಸ್ ಹಾಳು ಮಾಡುವ ಹುನ್ನಾರ ಮಾಡುತ್ತಿದ್ದೀರಾ ಎಂದರು.

ನಗರಸಭೆ ಮೈತ್ರಿ ವೇಳೆ ಜೊತೆಗಿದ್ದ ಎಲ್ಲರೂ ರಮೇಶ್ ಗೌಡರಿಗೆ ಮುಂದಾಳತ್ವ ಬೇಡ ಎಂದು ವರಿಷ್ಠರಿಗೆ ತಿಳಿಸಬೇಕಿತ್ತು. ಆಗ ಇಲ್ಲದ್ದು, ಅಧಿಕಾರ ಕೈತಪ್ಪಿದೆ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪಶ್ನಿಸಿದರು..?

ಜೆಡಿಎಸ್ ಪಕ್ಷದ ಸಿದ್ದಾಂತದಂತೆ ಎಲ್ಲರಿಗೂ ಸಮಾನತೆ ಅಪ್ಪಯ್ಯಣ್ಣರಿಂದ ದೊರೆತಿದೆ. ಎಸ್ಸಿ ಸಮುದಾಯದ ಹೆಣ್ಣು ಮಗಳಿಗೆ ಅವಕಾಶ ನೀಡಿದಕ್ಕೆ ಪತ್ರಿಕಾಗೋಷ್ಠಿ ನಡೆಸುತ್ತಿರಾ..? ರವಿಕುಮಾರ್ ಅವರಿಗೆ ನಾವು ವಿರೋಧ ಮಾಡಿಲ್ಲ. ಆದರೆ ಯಾವ ಯಾವ ಸದಸ್ಯರ ಸಂಪರ್ಕಿಸಿದ್ದಾರೆ ಅತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ, ಟಿಎಪಿಎಂಸಿಎಸ್ ಚುನಾವಣೆ ವೇಳೆ ಹಲವು ಬಾರಿ ಜೆಡಿಎಸ್ ಪಕ್ಷದ ಕಚೇರಿಗೆ ತೆರಳಿದಾಗ. ಎಲ್ಲರೂ ಆಕಾಂಕ್ಷಿಗಳಾಗಿ ಒತ್ತಡ ಉಂಟಾಯಿತು. ಆದರೆ ಆಂಜನಗೌಡ ಚರ್ಚೆಗೂ ಮುನ್ನವೇ ಅಭ್ಯರ್ಥಿಗಳಿಂದ ನಾಮಪತ್ರ ಹಾಕಿಸಿದರು. ಈ ಕುರಿತು ವರಿಷ್ಠರಿಗೆ ತಿಳಿಸಿದಾಗ, ತಾವು ಗೆದ್ದು ಬನ್ನಿ ಎಂದು ಸಲಹೆ ಇತ್ತರು. ಈ‌ ನಿಟ್ಟಿನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಯಿತು.

ಜೆಡಿಎಸ್ ಪಕ್ಷದಲ್ಲಿ ಎಸ್ಸಿ ಎಸ್ಟಿ ಇರಬಾರದ..? ಎಂದು ಪ್ರಶ್ನಿಸಿದ ಆನಂದ್, ನನಗೆ ಅಡ್ಡಿ ಮಾಡಿದ್ದು ಬಿ.ಮುನೇಗೌಡ, ಆಂಜನಗೌಡ. ಎಸ್ಸಿ ಜನಾಂಗದವನೆಂಬ ಕಾರಣಕ್ಕೆ ಅಧ್ಯಕ್ಷನಾಗಲು ವಿರೋಧಿಸಿದವರು ಇವರುಗಳೆ ಎಂದು ಆರೋಪಿಸಿದರು.

ಪಕ್ಷವನ್ನು ಒಡೆದಿದ್ದು ಯಾರು…?: ರಮೇಶ್ ಗೌಡ ಮತ್ತು ಹರೀಶ್ ಗೌಡರನ್ನು ಹೊರಗಿನವರು ಎಂದು ಆರೋಪಿಸುವವರಿಗೆ ಮುನೇಗೌಡ ಹೊರಗಿನವರು ಎಂದು ತಿಳಿದಿಲ್ಲವಾ. ಅವರಿಗೆ ನಾವೆಲ್ಲ ಬೆಂಬಲ ನೀಡಿಲ್ಲವೇ..? ನಮ್ಮ ಮೇಲೆ ಆರೋಪಿಸುವ ಮುಖಂಡರು ಮುನೇಗೌಡರ ಚುನಾವಣೆಯಲ್ಲಿ ಅವರ ವಾರ್ಡ್ ಅಲ್ಲಿ ಎಷ್ಟು ಮತ ಕೊಡಿಸಲಾಗಿದೆ ಲೆಕ್ಕಾ ತರಲಿ, ನಾವು ಕೊಡಿಸಿರುವ ಲೆಕ್ಕವನ್ನು ತರುತ್ತೇವೆ ಎಂದು ಸವಾಲೆಸೆದರು. 

ಅಪ್ಪಯ್ಯಣ್ಣರ ವಿರುದ್ಧ ಮಾತಾಡುವವರು, ಬಮೂಲ್ ಚುನಾವಣೆ, ಲೋಕಸಭೆ ಚುನಾವಣೆಯ ವೇಳೆ ಯಾರಿಗೆ ಕೈಜೋಡಿಸಿ ಪಕ್ಷ ದ್ರೋಹ ಮಾಡಿದ್ದಾರೆ ಎಂಬುದು  ತಿಳಿದಿದೆ. ಕಾರ್ಯಕರ್ತರ ದಿಕ್ಕು ತಪ್ಪಿಸಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ಆರೋಪಿಸಿದರು.

ಒಬ್ಬ ವಕೀಲನಾಗಿ ಹರೀಶ್ ಗೌಡರ ಕುರಿತು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಇಲ್ಲ ಎನ್ನುತ್ತೀರಿ, ನಿಮ್ಮ ಮೇಲೆ ಹರೀಶ್ ಗೌಡ ಮಾನನಷ್ಟ ಮೊಕದ್ದಮೆ ಹಾಕಬಹುದಲ್ವಾ. ಹೊರಗಿಂದ ಮುನೇಗೌಡ, ಮಂಜುನಾಥ್ ಕರೆತದವರು ನೀವೆ. ಈಗ ಕರೀಗೌಡ ಅವರನ್ನು ಕರೆತಂದಿರುವುದು ನೀವೆ ಹೊರತು ನಾವಲ್ಲ. ನಾವು ಪಕ್ಷ ನಿಷ್ಟರಾಗಿ ದುಡಿಯುತ್ತಿದ್ದೇವೆ. ಎಸ್ಸಿ, ಎಸ್ಟಿ ಜನಾಂಗಕ್ಕೆ ಅವಕಾಶ ನೀಡಿದ್ದಕ್ಕೆ ಹತಾಶರಾಗಿ ಆ ಗುಂಪು, ಈ ಗುಂಪು, ಚೇಲಾಗಳು ಎಂದು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಎಸ್ಸಿ ಜನಾಂಗಕ್ಕೆ ಅನ್ಯಾಯ ಎಸಗಿದ್ದು ಯಾರು..? ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಆನಂದ್ ಸವಾಲೆಸೆದರು.

ನಗರಸಭೆ ಚುನಾವಣೆಯಲ್ಲಿ ಬಿಫಾರಂ ಕೊಟ್ಟಿದ್ದು ಅಪ್ಪಯ್ಯಣ್ಣರಿಗೆ. ಆದರೆ ಮುನೇಗೌಡರ ಎತ್ತಿಕಟ್ಟಿ ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ನೀಡಿ, ಆ ಕುಟುಂಬವನ್ನು ಹಾಳು ಮಾಡಿದಲ್ಲದೆ. ಪಕ್ಷವನ್ನು ಹಾಳು ಮಾಡುತ್ತಿರುವುದು ನೀವುಗಳು. ನಿಮ್ಮಿಂದಲೇ ತಾಲೂಕಿನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಕಾರಣವಾಗುತ್ತಿದ್ದಾರೆ ಎಂದರು.

ನಗರಸಭೆ ಹಿರಿಯ ಮುಖಂಡರಾದ. ತ.ನ.ಪ್ರಭುದೇವ್ ಮಾತನಾಡಿ, ಮುಖಂಡರ ಜಡತ್ವ, ಅಭಿವೃಚಿಯ ಕಾರಣ ಗೊಂದಲ ಕಾರಣವಾಗಿದೆ. ಎಲ್ಲ ಪಕ್ಷಗಳಲ್ಲಿ ಗೊಂದಲ ಇದ್ದರು ಜೆಡಿಎಸ್ ಪಕ್ಷದ ಗೊಂದಲ ಬೇಗ ಹೊರಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ವಿರುದ್ಧ ಕೆಲ ಮುಖಂಡರು ಇತ್ತೀಚೆಗೆ ನಡೆದ ಸುದ್ದಿಗೊಷ್ಠಿಯಲ್ಲಿ, ಜೆಡಿಎಸ್ ಪಕ್ಷಕ್ಕೆ ಬಂದ ನಂತರ ಜೆಡಿಎಸ್ ನಿಂದಲೇ ಮೂರು ಬಾರಿ ಸದಸ್ಯನಾಗಿ, ಅಧಿಕಾರ ಪಡೆದಿದ್ದೇನೆ ಎಂದು ಪದೇ ಪದೇ ಆರೋಪಿಸಿರುವುದು ನೋವನ್ನುಂಟು ಮಾಡಿದೆ. 2007-08 ರಲ್ಲಿ ಪಕ್ಷ ಸೇರ್ಪಡೆಯಾದ ನಂತರ ಪಕ್ಷದಲ್ಲಿ ಹಲವು ನೋವುಗಳನ್ನು ಅನುಭವಿಸಿದ್ದೇನೆ. ಪಕ್ಷಕ್ಕೆ ಸೇರ್ಪಡೆಯಾಗುವ ಮುಂಚೆಯೇ ನಾನು ಮೂರು ಬಾರಿ ನಗರಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೆ, ವಿಧಾನಪರಿಷತ್ ಚುನಾವಣೆಗೂ ಸ್ಪರ್ದಿಸಿದ್ದೆ. 

ಆತ್ಮೀಯ ಮಿತ್ರರು ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕಾರಣ ನೋವಿನಿಂದ ಮಾತಾಡುತ್ತಿದ್ದಾರೆ, ನಾ ಏನು ಬೇಜಾರು ಮಾಡಿಕೊಂಡಿಲ್ಲ. ಜೆಡಿಎಸ್ ಪಕ್ಷ ನಗರಸಭೆ ಚುನಾವಣೆ ವೇಳೆ ಪ್ರತಿ ಚುನಾವಣೆಯಲ್ಲಿ ಸದಸ್ಯರ ಸಂಖ್ಯೆ ಕಳೆದುಕೊಳ್ಳುತ್ತಿದ್ದು, ಕ್ಷುಲಕ ವಿಚಾರವನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಪಕ್ಷವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಪಕ್ಷದ ಕೆಲ ಮುಖಂಡರು ನಾ ಅಧ್ಯಕ್ಷ ಸ್ಥಾನಕ್ಕೇರುವ ವೇಳೆ ಗುಂಪುಗಾರಿಕೆ ಮಾಡಿದ್ದು, ಸದಸ್ಯನಾಗಿದ್ದ ವೇಳೆ ವಜಾ ಗೊಳಿಸುವಂತೆ ನ್ಯಾಯಾಲಯಕ್ಕೆ ಓಗಿದ್ದು, ದೇವೇಗೌಡರ ಸಮುಖದಲ್ಲಿ ಮೈ ಕಿತ್ತುಕೊಂಡು ಅವಮಾನ ಸೇರಿದಂತೆ ಪಕ್ಷಕ್ಕೆ ಬಂದ ಮೇಲೆ ಪದೇ ಪದೇ ಅವಮಾನ ಮಾಡುತ್ತಲೇ ಇದ್ದಾರೆ ಎಂದು‌ ಗದ್ಗದಿತರಾದರು.

ಮೈತ್ರಿ ವಿಚಾರದ ಕುರಿತು ಬಿಜೆಪಿಯ ಸಚಿವರಾದ ಆರ್.ಅಶೋಕ್ ಅವರ ಸಮ್ಮುಖದಲ್ಲಿ ನಡೆದ ಚರ್ಚೆಯ ವೇಳೆ ರವಿಕುಮಾರ್ ಅವರನ್ನು ಮೂರು ಬಾರಿ ಗೆದ್ದಿದ್ದಾರೆ ಅವರಿಗೆ ಸ್ಥಾಯಿಸಮಿತಿ ಅಧ್ಯಕ್ಷರನ್ನಾಗಿಸುವಂತೆ ಸೂಚಿಸಲಾಗಿತ್ತು. ರವಿಕುಮಾರ್ ಅವರು ಅಪ್ಪಯ್ಯಣ್ಣರೊಂದಿಗೆ ಮಾತನಾಡದೆ ಇದ್ದರು. ನಾನು ಮತ್ತು ಡಾ.ವಿಜಯಕುಮಾರ್ ಅವರು ರವಿಕುಮಾರ್ ಅವರಿಗೆ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಕೊಡಿಸಲು ಮಾತುಕತೆ ನಡೆಸಿದ್ದೆವು ಆದರೆ ಇದೆಲ್ಲವನ್ನು ತಿಳಿಯದಂತೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಿಜ ನಾ ಪಕ್ಷಕ್ಕೆ ಬಂದು 15 ವರ್ಷವಾಯಿತು. ಆದರೆ ನೀವು ಹುಟ್ಟುವಾಗಲೇ ಬಾಯಿಯಲ್ಲಿ ಜೆಡಿಎಸ್ ಸ್ಪೂನ್ ಇಟ್ಟುಕೊಂಡು ಹುಟ್ಟಿದ್ರಿ ಎಂಬುದು ತಿಳಿಯಲಿಲ್ಲ ಎಂದು ರವಿಕುಮಾರ್ ಅವರಿಗೆ ಟಾಂಗ್ ನೀಡಿದರು.

ಬಿ.ಮುನೇಗೌಡ ಅವರು ಮೂರು ಚುನಾವಣೆಯಲ್ಲಿ ನೋವುಂಡಿದ್ದಾರೆ. ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಬೆಂಬಲಿಸಲು ನಾವು ಬದ್ದರಾಗಿದ್ದೆವೆ. ಮುನೇಗೌಡ ಅವರು ಎಲ್ಲರನ್ನೂ ಒಟ್ಟಾಗಿ ಸಂಘಟನೆ ಮಾಡುವತ್ತ ಚಿಂತಿಸಬೇಕಿದೆ ಎಂದರು.

ಈ ವೇಳೆ ವಿಧಾನಸಭೆ ಮಾಜಿ ಸದಸ್ಯ ರಮೇಶ್ ಗೌಡ, ಮುಖಂಡರಾದ ಹರೀಶ್ ಗೌಡ, ಹೆಚ್.ಅಪ್ಪಯ್ಯಣ್ಣ, ತೆಂಗುನಾರು ಮಂಡಳಿ ರಾಜ್ಯಾಧ್ಯಕ್ಷ ಗಂಟಿಗಾನಹಳ್ಳಿ ಬಾಬು, ಸ್ಥಾಯಿಸಮಿತಿ ಅಧ್ಯಕ್ಷೆ ಆದಿಲಕ್ಷ್ಮಿ, ಚಂದ್ರಶೇಖರ್, ಅಶ್ವಥ್ ನಾರಾಯಣ್, ಕುಂಟನಹಳ್ಳಿ ಮಂಜುನಾಥ್, ಮುನಿಯಪ್ಪ, ನಾಗಣ್ಣ ಜಗನಾಥ ಚಾರ್ ಮತ್ತಿತರರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]