ದೊಡ್ಡಬಳ್ಳಾಪುರ: ಗುರುವಾರ ರಾತ್ರಿ ಹಾಡೋನಹಳ್ಳಿ ಬಳಿ 20 ಕುರಿ- ಮೇಕೆ ಕಳುವಾಗಿರುವ ಘಟನೆ ಬೆನ್ನಲ್ಲೇ, ಭಾನುವಾರ ತಾಲೂಕಿನ ಸೊಣ್ಣಮಾರನಹಳ್ಳಿ ಗ್ರಾಮದಲ್ಲಿ ಇದೇ ರೀತಿ 20 ಕುರಿಗಳು ಕಳುವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗ್ರಾಮದ ನಡು ಭಾಗದಲ್ಲಿರುವ ಕುರಿ ದೊಡ್ಡಿಗೆ ನುಗ್ಗಿರುವ ಕದೀಮರು ಬೆಲೆಬಾಳುವ 20ಕುರಿಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಮುಂಚೆ ರಾಜಘಟ್ಟದಲ್ಲಿ ಇದೇ ರೀತಿ ಕ್ವಾಲೀಸ್ ಕಾರಿನಲ್ಲಿ ಕುರಿಗಳ ಕಳವು ಪ್ರಕರಣ ನಡೆದಿತ್ತು. ಮತ್ತೆ ಕೆಲವು ದಿನಗಳ ಅಂತರದಲ್ಲಿ ಎರಡು ಕಡೆಗಳಲ್ಲಿ ಒಂದೇ ರೀತಿ ಬೆಲೆ ಬಾಳವ ಕುರಿಗಳನ್ನು ಕಳವು ಮಾಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಕರವೇ ಮುಖಂಡರಾದ ರಾಜಘಟ್ಟರವಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಪದೇ ಪದೆ ಕುರಿ – ಮೇಕೆಗಳ ಕಳ್ಳತನ ಮರುಕಳಿಸುತ್ತಿರುವುದು ಗ್ರಾಮೀಣ ಭಾಗದ ರೈತರಲ್ಲಿ ಆತಂಕವನ್ನುಂಟುಮಾಡಿದೆ. ಕೂಡಲೆ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಕಳ್ಳರ ಹೆಡೆಮುರಿ ಕಟ್ಟಿ, ರೈತರ – ನಾಗರಿಕರ ಆತಂಕ ದೂರ ಮಾಡುವಂತೆ ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

