ದೊಡ್ಡಬಳ್ಳಾಪುರ, (12): ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಪ್ರಾರಂಭವಾದ ಸೋನೆ ಮಳೆ,ಚಳಿಗಾಳಿ ಶನಿವಾರವು ಮುಂದುವರೆದಿತ್ತು. ಶನಿವಾರ ಇಡೀ ದಿನ ಸೂರ್ಯನ ದರ್ಶನವೇ ಆಗದಷ್ಟು ಮೋಡಿ ಮುಸುಕಿತ್ತು.
ನಗರ ಸೇರಿದಂತೆ ಎಲ್ಲೆಡೆ ಜನರು ಛತ್ರಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ತಿರುಗಾಡುತ್ತಿದ್ದ ದೃಶ್ಯ ಸಾಮಾನ್ಯಗಿತ್ತು. ಮಳೆಯಿಂದಾಗಿ ಗ್ರಾಹಕರು ಮನೆಯಿಂದ ಹೊರ ಬರಾದಿದ್ದರಿಂದ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಗಳ ಮಾರಾಟ ಕುಸಿದಿತ್ತು.
ಕುರಿ, ಮೇಕೆಗಳನ್ನು ಹೊರಗೆ ಬಿಟ್ಟು ಮೇಯಿಸಲಾಗದೆ ರೈತರು ಮೇವಿಗಾಗಿ ಪರದಾಡುವಂತಾಗಿತ್ತು. ಹಸುಗಳಿಗೆ ತೋಟಗಳಲ್ಲಿ ಬೆಳೆದಿರುವ ಹುಲ್ಲನ್ನು ಸಹ ಕೊಯ್ದು ತರಲು ಜಿಟಿ ಜಿಟಿ ಮಳೆ ಬಿಡುವು ನೀಡದೆ ಬೀಳುತ್ತಲೇ ಇತ್ತು.
ಸೋನೆ ಮಳೆಯಿಂದಾಗಿ ಕೃಷಿ ಚಟುಚಟಿಕೆಗಳಿಗೂ ಅಡ್ಡಿಯಾಗಿತ್ತು. ಗಾಳಿಯಿಂದಾಗಿ ಕಾಳು ಬಲಿತಿದ್ದ ರಾಗಿ ಹೊಲಗಳು ನೆಲಕಚ್ಚಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

