ಒಂದು ದಿನ ಕಳ್ಳನೊಬ್ಬ ಒಂದು ಮನೆಗೆ ಕಳ್ಳತನಕ್ಕಾಗಿ ಹೋಗುತ್ತಾನೆ. ಆ ಮನೆಯ ಮುಂದೆ ಒಂದು ಕಾವಲು ನಾಯಿ ಇರುತ್ತದೆ ಆ ನಾಯಿ ನಿಶ್ಯಬ್ಧವಾಗಿ ಕೂತು ಈ ಕಳ್ಳನನ್ನು ಗಮನಿಸುತ್ತಿರುತ್ತದೆ.
ಆಗ ಆ ಕಳ್ಳ ಈ ಬೊಗಳದ, ಸ್ವಲ್ಪವೂ ಪ್ರತಿಭಟಿಸದೆ ಸುಮ್ಮನೆ ಕುಳಿತ ನಾಯಿಯನ್ನು ನೋಡಿ ಕಳ್ಳತನಕ್ಕಾಗಿ ಮನೆಯೊಳಗೆ ನುಗ್ಗಲೋ ಬೇಡವೋ ಎಂಬ ದ್ವಂದ್ವಕ್ಕೆ ಬೀಳುತ್ತಾನೆ.
ಒಂದು ವೇಳೆ ಮನೆಯೊಳಗೆ ಹೋದಾಗ ಈಗ ಸುಮ್ಮನಿರುವ ಈ ನಾಯಿ ಬೊಗಳಿದರೆ ತನ್ನ ಕೆಲಸಕ್ಕೆ(ಕಳ್ಳತನಕ್ಕೆ ) ಕಷ್ಟವಾಗುವುದು ಈಗಲೇ ಬೊಗಳಿದರೆ ಬೇರೆ ಮನೆಗಾದರೂ ಹೋಗಿ ತನ್ನ ಕಸುಬು ಪೂರೈಸಿಕೊಳ್ಳಬಹುದು ಹೀಗೆ ಯೋಚಿಸಿದ.
ಅವನು ತಾನು ತಂದ ರೊಟ್ಟಿ ತುಂಡನ್ನು ಅದರ ಮುಂದೆ ಎಸೆದ ಅಷ್ಟೆ..!! ಆ ನಾಯಿ ಬೌ ಬೌ ಎಂದು ಅರಸುತ್ತಾ ಅವನ ಹಿಂದೆ ಬಿತ್ತು.. ಇದರಿಂದ ಕ್ಷಣಕಾಲ ಚಕಿತನಾದ ಕಳ್ಳ, ಮೊದಲಿಗೆ ಸುಮ್ಮನ್ನಿದ್ದ ನೀನು, ರೊಟ್ಟಿ ನೋಡಿದ ಕೂಡಲೇ ಏಕೆ ಅರಸಲು ಶುರುವಿಟ್ಟುಕೊಂಡೆ ಎಂದು ಕೇಳಲು, ಆಗ ಆ ನಾಯಿ ನೀನು ಸುಮ್ಮನೆ ಮನೆ ಮುಂದೆ ಬಂದು ನಿಂತಾಗ ನೀನು ಈ ಮನೆಯವರ ಬಂಧುವೋ ಅಥವಾ ಪರಿಚಯದವನೋ ಎಂದುಕೊಂಡು ಸುಮ್ಮನಿದ್ದೆ. ಆದರೆ ಯಾವಾಗ ನೀನು ಸುಖಾಸುಮ್ಮನೆ ಉಚಿತವಾಗಿ ರೊಟ್ಟಿಯ ತುಂಡನ್ನು ಎಸೆದೆಯೋ ಆಗಲೇ ನೀನೊಬ್ಬ ಕಳ್ಳ ಎಂದರ್ಥವಾಯಿತು.
ಆಲೋಚಿಸುವ ವಿಷಯವಲ್ಲವೇ ಇದು: ಉಚಿತ ಎಂದ ಕೂಡಲೇ ಮರು ಆಲೋಚನೆಯಿಲ್ಲದೆ ಮುಗಿಬೀಳುತ್ತಿರುವೆವು, ನಾವು ಸುಮ್ಮನೇ ರೊಟ್ಟಿ ಕೊಡುತ್ತಿದ್ದಾನೆಂದರೆ ಅದರ ಹಿಂದಿನ ಸ್ವಾರ್ಥ/ಲಾಭವನ್ನು ಗ್ರಹಿಸಿತು ಆ ನಾಯಿ.
ಆದರೆ ಮನುಷ್ಯರಾದ ನಾವು ಏನು ಮಾಡುತ್ತಿದ್ದೇವೆ..? ಅದರಲ್ಲೂ ಈ ಪ್ರಜಾಪ್ರಭುತ್ವದಲ್ಲಿ “ಉಚಿತ”ಕ್ಕೆ ಮರುಳಾಗಿ ಉಚಿತದ ದಾಸರಾಗಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುವುದಿಲ್ಲವೇ.
ಕೃಪೆ: ಸಾಮಾಜಿಕ ತಾಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

