ದೊಡ್ಡಬಳ್ಳಾಪುರ, (ನ.19): ತಾಲೂಕಿನ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೆ ಒಂದೇ ದಿನ ಇ-ಸ್ವತ್ತು ಮಾಡುವ ಮೂಲಕ ತಾಲೂಕು ಪಂಚಾಯಿತಿ ದಾಖಲೆ ನಿರ್ಮಿಸಲಾಗಿದೆ.
ಮುಜರಾಯಿ ದೇವಾಲಯಗಳ ಆಸ್ತಿ ಕಬಳಿಕೆ ತಡೆಗಟ್ಟಲು, ಒಂದೇ ದಿನದಲ್ಲಿ ಇ – ಸ್ವತ್ತು ಮಾಡುವ ಮೂಲಕ ತಾಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ಹಾಗೂ ಸಿಬ್ಬಂದಿಯ ಕಾರ್ಯ ಪ್ರಶಂಸೆಗೆ ಕಾರಣವಾಗಿದೆ.
ಇದರನ್ವಯ ತಾಲೂಕಿನ ವಿವಿಧ ಗ್ರಾಮಗಳ 286 ದೇವಾಲಯಗಳಿಗೆ ಇ-ಸ್ವತ್ತು ಮಾಡಲಾಗಿದೆ.
ಇಂದು ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದ. ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಶಾಸಕ.ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಆರ್.ಲತಾ ಅವರು ವಡ್ಡರಹಳ್ಳಿ ಶ್ರೀ ತಿರುಮಲ ದೇವಾಲಯ ಅರ್ಚಕರಾದ ಶಂಕರ್ ಅವರಿಗೆ ದೇವಾಲಯದ ಇ-ಸ್ವತ್ತು ಪತ್ರವನ್ನು ವಿತರಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ತೇಜಸ್ ಕುಮಾರ್, ತಹಶೀಲ್ದಾರ್ ಮೋಹನಕುಮಾರಿ, ಇಒ ಶ್ರೀನಾಥ್ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

