ದೊಡ್ಡಬಳ್ಳಾಪುರ, (ನ.20): ವಿದ್ಯುತ್ ಬಳಕೆ ಮಾಡುವ ಗ್ರಾಹಕರು ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಸರಬರಾಜು ರದ್ದುಗೊಳಿಸಿರುವ ಬೆಸ್ಕಾಂ ಆದೇಶವನ್ನು ಖಂಡಿಸಿ, ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನವೆಂಬರ್ 22 ರಂದು ಬೆಳಗ್ಗೆ 11 ಗಂಟೆಗೆ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, ಕಳೆದ ಐದು ವರ್ಷಗಳಿಂದ ನೇಯ್ಕೆ ಉದ್ಯಮ ಒಂದಲ್ಲ ಒಂದು ರೀತಿ ಕಷ್ಟಕ್ಕೆ ಸಿಲುಕಿದೆ . ಈ ವೇಳೆಯಲ್ಲಿಯೇ ಬೆಸ್ಕಾಂ ವಿದ್ಯುತ್ ಬಳಕೆ ಮಾಡುವ ಗ್ರಾಹಕರು ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಸರಬರಾಜು ರದ್ದುಗೊಳಿಸಿರುವ ಆದೇಶ ಹೊರಡಿಸಿದೆ.
ಹಲವಾರು ದೊಡ್ಡ ಸಂಸ್ಥೆಗಳು, ಸರ್ಕಾರಿ ಅಂಗ ಸಂಸ್ಥೆಗಳು ಸಾಕಷ್ಟು ಬಾಕಿ ಉಳಿಸಿಕೊಂಡಿದ್ದರೂ ಸಹ ವಸೂಲಿ ಮಾಡದ ಬೆಸ್ಕಾಂ ಬಡ ನೇಕಾರರ ನೂರಾರು ರೂ ಬಾಕಿಯನು ವಸೂಲಿ ಮಾಡಲು ಈ ಆದೇಶ ಹೊರಡಿಸಿದೆ. ಈ ಕೂಡಲೇ ಈ ಆದೇಶ ರದ್ದುಪಡಿಸುವಂತೆ ಬೆಸ್ಕಾಂ ಕಾರಾಲಯದ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಎಲ್ಲಾ ವಿದ್ಯುತ್ ಗ್ರಾಹಕರು ಭಾಗವಹಿಸಬೇಕೆಂದು ಬಿ.ಜಿ.ಹೇಮಂತರಾಜು ಮನವಿ ಮಾಡಿದ್ದಾರೆ .
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

