ದೊಡ್ಡಬಳ್ಳಾಪುರ, (ನ,22): ಕೊನೆಯ ಕಾರ್ತಿಕ ಸೋಮವಾರದ ಪ್ರಯತ್ನ ಬಯಲು ಬಸವಣ್ಣ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ, ಕಡಲೆಕಾಯಿ ಪರಿಷೆಗೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜಿ.ಜೆ.ಹೇಮಾವತಿ ಭೇಟಿ ನೀಡಿದ್ದರು.
ಕಡಲೆಕಾಯಿ ಪರಿಚೆ ಅಂಗವಾಗಿ ದೇವಾಲಯದಲ್ಲಿ ಬಯಲು ಬಸವಣ್ಣ, ಮಹಾ ಗಣಪತಿ, ಪಾರ್ವತಿ ದೇವರಿಗೆ ವಿಶೇಷ ಕಡಲೆಕಾಯಿ ಅಲಂಕಾರ ಮಾಡಲಾಗಿತ್ತು.
ಸಹಾಯಕ ಆಯುಕ್ತೆ ಜಿ.ಜೆ.ಹೇಮಾವತಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮುಜರಾಯಿ ಇಲಾಖೆಯ ಗುಮಾಸ್ತ ಹೇಮಂತ್, ಅರ್ಚಕ ನವೀನ್ ಸೇರಿದಂತೆ ಬಯಲು ಬಸವಣ್ಣ ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

