ಒಂದು ಊರಿನಲ್ಲಿ ಇಬ್ಬರು ಅಣ್ಣ ಮತ್ತು ತಂಗಿ ಇದ್ದರು. ಅವರಿಬ್ಬರೂ ತುಂಬಾ ಜಾಣರು, ಧೈರ್ಯಶಾಲಿಗಳು, ಚಾಣಾಕ್ಷರು ಆಗಿದ್ದರು, ಮತ್ತು ಇಬ್ಬರು ತುಂಬಾ ಪ್ರೀತಿಯಿಂದ ಇದ್ದರು.
ಒಂದು ದಿನ ತಂಗಿಗೆ ಕಾಡಿನಲ್ಲಿ ಇರುವ ಆನೆ ನೋಡಬೇಕು ಎಂದು ಅನಿಸಿತು. ಆಕೆ ತನ್ನ ಆಸೆಯೆನ್ನು ತನ್ನ ಅಣ್ಣನಿಗೆ ಹೇಳಿದಳು ಮಕ್ಕಳೇ. ಆದರೆ ಅಣ್ಣ ಕಾಡಿಗೆ ಹೋಗೋದು ಬೇಡ, ಅಲ್ಲಿ ತುಂಬಾ ಕಾಡುಪ್ರಾಣಿಗಳು ಇರುತ್ತವೆ ಮತ್ತು ಅವು ಬಹಳ ಅಪಾಯಕಾರಿ ಆಗಿರುತ್ತವೆ ಎಂದು ಹೇಳಿದ.
ತಂಗಿಗೆ ಅವನ ಮಾತು ಸಮಾಧಾನ ಕೊಡಲಿಲ್ಲ ಅವಳು ತುಂಬಾ ಅಳ ತೊಡಗಿದಳು ಆಗ ಅಣ್ಣ ಅವಳಿಗೆ ಒಂದು ಕಾಗದದಲ್ಲಿ ಆನೆ ಚಿತ್ರ ಬಿಡಿಸಿ, ಇದೆ ಆನೆ ತೊಗೊ ಎಂದ. ಇಲ್ಲ ಇದು ನಿಜವಾದ ಆನೆ ಅಲ್ಲ, ನಾನು ಅದು ಕಬ್ಬು ತಿನ್ನೋದು ನೋಡಬೇಕು ಅಂತ ತುಂಬಾ ಅಳತಿದ್ದಳು.
ಆಗ ಅಣ್ಣನಿಗೆ ತುಂಬಾ ಚಿಂತೆ ಆಯಿತು, ಹೇಗೆ ಇವಳನ್ನು ಸಮಾಧಾನ ಮಾಡುವದು ಎಂದು ಒಂದು ಉಪಾಯ ಮಾಡಿದ. ಅಳಬೇಡ ತಂಗಿ ನಾಳೆ ನಿನಗೆ ಆನೆ ತೋರಿಸ್ತೀನಿ, ಆದರೆ ನೀನು ಆನೆಯೇನ್ನು ದೂರದಿಂದ ನೋಡಬೇಕು, ಮುಟ್ಟಬಾರದು ಎಂದು ಹೇಳಿದ. ಆಯಿತು ಆದರೆ, ನಾಳೆ ನೀನು ಆನೆ ತೋರಿಸದಿದ್ದರೆ ನಾನು ತುಂಬಾ ಅಳುತ್ತೇನೆ ಎಂದು ಹೇಳಿ ಮಲಗಿಕೊಂಡಳು.
ರಾತ್ರಿ ಎಲ್ಲಾ ಅಣ್ಣ ಎದ್ದು ಮನೆಯ ಹೊರಗಡೆ ಕಾಡಿನ ತರ ತಯಾರು ಮಾಡಿ ಅದರ ಒಳಗಡೆ ಕಾಣದಂತೆ ಡಿಜಿಟಲ್ ಸ್ಕ್ರೀನ್ ಇಟ್ಟು ಮಲಗಿಕೊಂಡ. ಬೆಳಿಗ್ಗೆ ತಂಗಿ ಎದ್ದ ತಕ್ಷಣ, ಅವಳ ಕಣ್ಣು ಮುಚ್ಚಿ ಹೊರಗಡೆ ಕರೆದುಕೊಂಡು ಬಂದು, ಇದೋ ನೋಡು ಆನೆ ಬಂದಿದೆ ಎಂದು ಆನೆಯ ಡಿಜಿಟಲ್ ಸ್ಕ್ರೀನ್ ಹಚ್ಚಿ ತೋರಿಸಿದ.
ತಂಗಿ ತುಂಬಾ ಖುಷಿಯಾಗಿ ಕುಣಿದಾಡಿದಳು. ಅಣ್ಣನಿಗೆ ಒಂದು ಪ್ರೀತಿಯ ಮುತ್ತು ಕೊಟ್ಟು ಒಳಗಡೆ ಹೋದಳು. ಅಣ್ಣ ಅವಳ ಖುಷಿ ನೋಡಿ ತಾನು ಖುಷಿಯಾಗಿ ಸಂತೃಪ್ತಿ ಪಟ್ಟ.
ಸಂಗ್ರಹ: ಸಾಮಾಜಿಕ ಜಾಲತಾಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

