ಒಂದು ಊರಿನಲ್ಲಿ ಒಬ್ಬ ರಾಜ ಇದ್ದ ಮಕ್ಕಳೆ ಆ ರಾಜ ತುಂಬಾ ಶಕ್ತಿಶಾಲಿ, ಧರ್ಮವಂತ, ಸಹಾಯ ಮಾಡುವಂತವನು ಆಗಿದ್ದುನ್ನು. ಅವನಿಗೆ ಇಬ್ಬರು ಜೈ ಮತ್ತು ವಿಜಯ್ ಎಂಬ ಗಂಡು ಮಕ್ಕಳು ಇದ್ದರು.
ಜೈ ಏನೇ ಕೆಲಸ ಮಾಡಿದರು ಅದರಲ್ಲಿ ಜಯಶಾಲಿ ಆಗುತ್ತಿದ್ದ. ಆದರೆ ವಿಜಯ್ ಕೆಲಸದಲ್ಲಿ ಜಯಶಾಲಿ ಆಗುತ್ತಿರಲಿಲ್ಲ. ಇದರಿಂದಾಗಿ ವಿಜಯ್ ಗೆ ಜೈ ಮೇಲೆ ತುಂಬಾ ಸಿಟ್ಟು ಬರುತಿತ್ತು. ಅವನನ್ನು ಜನರು ಹೊಗಳುವದನ್ನು ನೋಡಿ ಇವನಿಗೆ ಹೊಟ್ಟೆಯಲ್ಲಿ ಕಾರ ಕಲಿಸಿದ ಹಾಗೆ ಆಗ್ತಿತ್ತು.
ಅವನು ಒಂದು ತೀರ್ಮಾನಕ್ಕೆ ಬಂದ. ಹೇಗಾದರೂ ಮಾಡಿ ಅವನ ಕೆಲಸ ಆಗದ ಹಾಗೆ ತಡೀಬೇಕು. ಎಂದು ಒಂದು ದಿನ ರಾಜ ಇಬ್ಬರನ್ನು ಕರೆದು ರಾಜ್ಯದಲ್ಲಿ ಪ್ರಜೆಗಳ ತೊಂದರೆಗಳನ್ನ ಕೇಳಿಕೊಂಡು ಬನ್ನಿ ಎಂದು ಹೇಳಿದ.
ಜೈ ತಕ್ಷಣ ರಾಜನ ಕೈಗೆ ಒಂದು ಟಿಪ್ಪಣ್ಣಿ ಕೊಟ್ಟು ಇದು ಅವರ ತೊಂದರೆ ಎಂದು ಹೇಳಿದ. ಆದರೆ ವಿಜಯ್ ಅದನ್ನು ಒಪ್ಪಲಿಲ್ಲ ರಾಜ್ಯದಲ್ಲಿ ಏನು ತೊಂದರೆ ಇಲ್ಲಾ ಇದ್ದೆಲ್ಲ ಸುಳ್ಳು ಎಂದು ಹೇಳಿದ.
ಆಗ ರಾಜ ಹೇಳಿದ ನಿನಗೂ ಮತ್ತು ಜೈ ಗು ಇರುವ ವ್ಯತ್ಯಾಸ ಇದೆ. ಅವನು ಸಮಸ್ಯೆಯನ್ನು ಮೊದಲೇ ತಿಳಿದುಕೊಂಡು ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡ್ತಾನೆ. ಆದರೆ ನೀನು ಸಮಸ್ಯೆ ಬರುವರೆಗೂ ಕಾಯಿತಿಯ. ಆದ ಕಾರಣ ನಿನ್ನ ಕೆಲಸ ಬೇಗ ಆಗುವದಿಲ್ಲ ಎಂದು ರಾಜ ಹೇಳಿದ.
ಆಗ ವಿಜಯ್ ಗೆ ತನ್ನ ತಪ್ಪಿನ ಅರಿವು ಆಯಿತು. ಅಂದಿನಿಂದ ಶ್ರದ್ಧೆಯಿಂದ ಕೆಲಸ ಮಾಡಿ ಜಯಗಳಿಸಿದ. ಆದ್ದರಿಂದ ನಾವು ಸಮಸ್ಯೆಯೆನ್ನು ಎಂಬುದನ್ನು ಮೊದೆಲೇ ತಿಳಿದುಕೊಂಡು ಶ್ರದ್ಧೆಯಿಂದ ಕೆಲಸ ಮಾಡಬೇಕು. (ಪೋಟೋ ಕೃಪೆ: Free webStok)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

