ದೊಡ್ಡಬಳ್ಳಾಪುರ, (ಡಿ.12): ತಾಲೂಕಿನ ಹುಲಿಕುಂಟೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಟಿ.ಎಲ್.ಮೂರ್ತಿ ಅವರು ಒಂದು ಮತದ ಅಂತರದಿಂದ ಆಯ್ಕೆಯಾಗಿದ್ದಾರೆ.
ಕೆಂಪವೆಂಕಟಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಹುಲಿಕುಂಟೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ, ಚುನಾವಣಾಧಿಕಾರಿ ಆರ್.ರಂಗಪ್ಪ, ಪಿಡಿಒ ಸಿದ್ದರಾಜು ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
15 ಸದಸ್ಯತ್ವ ಬೆಂಬಲ ಬಲದ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಸದಸ್ಯರಾದ ಟಿ.ಎಲ್.ಮೂರ್ತಿ, ನರಸಿಂಹಯ್ಯ ನಾಮಪತ್ರ ಸಲ್ಲಿಸಿದ್ದು, ನರಸಿಂಹಯ್ಯ 07 ಮತ ಹಾಗೂ ಟಿ.ಎಲ್.ಮೂರ್ತಿ ಅವರು 08 ಮತ ಪಡೆದರು. ಈ ಹಿನ್ನೆಲೆಯಲ್ಲಿ 08 ಮತ ಪಡೆದ ಮೂರ್ತಿ ಅವರನ್ನು ಉಳಿದ ಅವಧಿಗೆ ಅಧ್ಯಕ್ಷರನ್ನಾಗಿ ಅವರನ್ನು ಘೋಷಿಸಲಾಯಿತು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಟಿ.ಎಲ್.ಮೂರ್ತಿ ಅವರನ್ನು ಎಂಪಿಸಿಎಸ್ ಅಧ್ಯಕ್ಷ ರಾಮಣ್ಣ, ಗ್ರಾಪಂ ಅಧ್ಯಕ್ಷೆ ಸವಿತಾ, ಸದಸ್ಯರಾದ ಪಾರ್ವತಮ್ಮ, ಕೆಂಪವೆಂಕಟಯ್ಯ, ಚಿಕ್ಕವೀರಣ್ಣ, ಹನುಮಂತರಾಜು, ಗೀತಾ, ಯಶೋದಮ್ಮ, ಬೈಲಾಂಜಿನಪ್ಪ, ಮುಖಂಡರಾದ ರಾಜ್ಕುಮಾರ್, ವಿವೇಕ್ ಮತ್ತಿತರರು ಶುಭಕೋರಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

