ಕೆ.ಆರ್.ಪೇಟೆ, (ಆಗಸ್ಟ್.02): ವಯನಾಡ್ ಜಲಪ್ರಳಯ ದಲ್ಲಿ ಮೃತರಾದ ತಾಲೂಕಿನ ಕತ್ತರಘಟ್ಟದ ಲೀಲಾವತಿ ಹಾಗೂ ಚಿಕ್ಕ ಮಗು ನಿಹಾಲ್ ಮನೆಗೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಟಿ.ಮಂಜು ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ನಮಗೆ ಕುಟುಂಬದ ಆಧಾರಸ್ಥಂಭ ವಾಗಿದ್ದ ಲೀಲಾವತಿ ಹಾಗೂ ಇನ್ನೂ ಬಾಳಿ ಬದುಕುವ ಮುನ್ನವೇ ಜೀವ ಕಳೆದುಕೊಂಡ ಪುಟ್ಟ ಕಂದ ನಿಹಾಲ್ ಪಾರ್ಥಿವ ಶರೀರ ವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಸಹಾಯ`ಮಾಡುವಂತೆ ಕುಟುಂಬದವರು ನಿಖಿಲ್ ಬಳಿ ಕಣ್ಣೀರು ಹಾಕಿ ಮನವಿ ಮಾಡಿದರು.
ಆಕ್ರಂದನ: ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡೂ ಕುಟುಂಬಗಳ ಸದಸ್ಯರ ಜತೆ ಮಾತನಾಡಿದ ನಿಖಿಲ್, ನಮ್ಮ ತಂದೆ ಕುಮಾರಸ್ವಾಮಿ ಅವರು ಕೇರಳ ವಯನಾಡು ಜಿಲ್ಲೆಯ ಡಿಸಿ ಜತೆ ಮಾತನಾಡಿದ್ದಾರೆ. ಪ್ರಕೃತಿ ವಿಕೋಪದಿಂದ ಸಾವು -ನೋವು ಆಗಿವೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ನಾವೆಲ್ಲರೂ ಶಕ್ತಿಯಾಗಿ ನಿಲ್ಲುತ್ತೇವೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

