ಹ್ಯಾಂಗ್ಝ್, (ಸೆ.27): ಏಷ್ಯನ್ ಗೇಮ್ಸ್ 2023ರ ನಾಲ್ಕನೇ ದಿನವಾದ ಇಂದು (ಸೆ.27) ಭಾರತ ಚಿನ್ನದಂತ ಸಾಧನೆ ಮಾಡಿದೆ. 25 ಮೀ ಪಿಸ್ತೂಲ್ ಟೀಂ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಶೂಟರ್ಗಳು ಚಿನ್ನದ ಪದಕ ಗೆದ್ದಿದ್ದಾರೆ.
ಕ್ರೀಡಾಪಟುಗಳಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಂ ಸಾಂಗ್ವಾನ್ ಎದುರಾಳಿಗಳ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಗೆದ್ದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
25 ಮಿಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಅಗ್ರ ಸ್ಥಾನ ಪಡೆದಿದ್ದು ಇಶಾ ಸಿಂಗ್ ಐದನೇ ಸ್ಥಾನ ಹಾಗೂ ರಿದಂ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತ 4 ಚಿನ್ನದ ಪದಕಗಳನ್ನು ಗೆದ್ದಿದೆ.
ಈ ಮೊದಲು 50 ಮೀಟರ್ ರೈಫಲ್ನಲ್ಲಿ ಆಶಿ ಚೌಕೈ, ಮನಿನಿ ಕೌಶಿಕ್, ಸಿಫ್ಟ್ ಕೌರ್ ಸಮಾ ಬೆಳ್ಳಿ ಪದಕ ಗೆದ್ದು ಸಾಧನೆ ಗೈದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….