ಉತ್ತರಾಖಂಡ, (ಅ.12): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಗುರುವಾರ ಉತ್ತರಾಖಂಡಕ್ಕೆ ಒಂದು ದಿನದ ಭೇಟಿಗೆ ಆಗಮಿಸಿದ್ದು, ಬೆಳಗ್ಗೆ ಪಿಥೋರಗಢದಲ್ಲಿ ಪಾರ್ವತಿ ಕುಂಡದಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಈ ಕುರಿತಂತೆ ಎಕ್ಸ್ (ಟ್ವಿಟ್) ಮಾಡಿರುವ ಮೋದಿಯವರು, ಉತ್ತರಾಖಂಡದ ಪಿಥೋರಗಢದ ಪವಿತ್ರ ಪಾರ್ವತಿ ಕುಂಡದ ದರ್ಶನ ಮತ್ತು ಪೂಜೆಯಿಂದ ನಾನು ತುಂಬಿ ಹೋಗಿದ್ದೇನೆ. ಇಲ್ಲಿಂದ ಆದಿ ಕೈಲಾಸ ದರ್ಶನದಿಂದ ಮನಸ್ಸೂ ಪ್ರಸನ್ನವಾಗಿದೆ. ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಈ ಸ್ಥಳದಿಂದ ಅವರು ತಮ್ಮ ದೇಶದ ಎಲ್ಲಾ ಕುಟುಂಬ ಸದಸ್ಯರಿಗೆ ಜೀವನದ ಸಂತೋಷವನ್ನು ನೀಡಲಿ ಹಾರೈಸಿದ್ದಾರೆ.
ಪ್ರಧಾನಿ ಕಾರ್ಯಾಲಯದಿಂದ ಬಂದಿರುವ ಮಾಹಿತಿ ಅನ್ವಯ, ಜೋಲಿಂಗ್ ಕಾಂಗ್ನಲ್ಲಿರುವ ಶಿವನ ನಿವಾಸ ಮತ್ತು ಕೈಲಾಸ ಶಿಖರಕ್ಕೆ ಭೇಟಿ ನೀಡುವ ಮೂಲಕ ಮೋದಿ ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಆ ನಂತರ ಪ್ರಧಾನಿಯವರು ಕುಂಜಿ ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ ಸ್ಥಳೀಯ ಜನರು ಮತ್ತು ಭದ್ರತಾ ಪಡೆ ಸಿಬ್ಬಂದಿಯನ್ನು ಭೇಟಿ ಮಾಡಲಿದ್ದಾರೆ.
ಉತ್ತರಾಖಂಡ್ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸುತ್ತೇನೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. “ಗೌರವಾನ್ವಿತ ಪ್ರಧಾನ ಮಂತ್ರಿಗಳ ಈ ಭೇಟಿ ಐತಿಹಾಸಿಕವಾಗಿದ್ದು, ಇದು ರಾಜ್ಯದ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಗುರುತನ್ನು ನೀಡುತ್ತದೆ. ಸಮೃದ್ಧ ಉತ್ತರಾಖಂಡದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….