ಬೆಂಗಳೂರು, (ಅ.12): ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶಾದ್ಯಂತ ಜಾರಿಗೊಳಿಸುತ್ತಿ ರುವ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಗುರುವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು.
ಈ ವೇಳೆ ಫೋನ್ಗಳಲ್ಲಿ ಮಾಮೂಲಿ ಎಸ್ಸೆಮ್ಮೆಸ್ ಬಜ ಸೌಂಡ್ ಬಾರದೇ, ವಿಚಿತ್ರ ಬಜ ಧ್ವನಿಯೊಂದಿಗೆ ಈ ತುರ್ತು ಸಂದೇಶ ಪಾಪ್ ಅಪ್ ಆಗಿದೆ. ಇದರರ್ಥ ತುರ್ತು ಸಂದೇಶಗಳು ಇದೇ ಬಜರ್ ಸೌಂಡ್ನೊಂದಿಗೆ ಮೊಬೈಲ್ ಗಳಿಗೆ ಬಂದು, ನಾಗರಿಕರನ್ನು ಎಚ್ಚರಿಸುತ್ತವೆ.
ಸಂದೇಶದಲ್ಲಿ ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶ ನಿರ್ಲಕ್ಷಿಸಿ. ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೆ ತಂದಿರುವ ಪ್ಯಾನ್-ಇಂಡಿಯಾ ತುರ್ತು ಪರೀಕ್ಷಿಸಲು, ಎಚ್ಚರಿಕೆ ವ್ಯವಸ್ಥೆ ಸಾರ್ವಜನಿಕ ಸುರಕ್ಷತೆ ಹೆಚ್ಚಿಸಲು ಮತ್ತು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆ ನೀಡುವ ಗುರಿಯನ್ನು ಈ ಸಂದೇಶ ಹೊಂದಿದೆ’ ಎಂದು ಬರೆಯಲಾಗಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಎಮರ್ಜೆನ್ಸಿ ಅಲರ್ಟ್ ಸಿಸ್ಟಂನ ಭಾಗವಾಗಿ ಸೆಲ್ ಬ್ರಾಡ್ಕ್ಯಾಸ್ಟ್ ಸಿಸ್ಟಂ ಅನ್ನು ರೂಪಿಸಲಾಗಿದೆ.
ಈ ಸಿಸ್ಟಂ ಅನ್ನು ಜಾರಿಗೆ ತರುವ ಮುನ್ನ ದೇಶಾದ್ಯಂತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ಭಾಗವಾಗಿ ಇವತ್ತು ಎಲ್ಲರ ಮೊಬೈಲ್ ನಂಬರ್ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿರಬಹುದು. ಇದು ಕೇವಲ ಸ್ಯಾಂಪಲ್ ಮೆಸೇಜ್ ಮಾತ್ರವೇ ಆಗಿರುತ್ತದೆ. ಯಾರು ಗಾಬರಿ ಆಗಬಾರದೆಂದು ಸೋಮವಾರ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿತ್ತು.
ಎಲ್ಲರಿಗೂ ಏಕಕಾಲದಲ್ಲಿ ಟೆಸ್ಟ್ ಮೆಸೇಜ್ ಬಂದಿರುವುದಿಲ್ಲ. ಏರ್ಟೆಲ್, ಜಿಯೋ, ವೊಡಾಫೋನ್ ಇತ್ಯಾದಿ ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ಈ ಅಲರ್ಟ್ ಮೆಸೇಜ್ ತಲುಪಿರುತ್ತದೆ. ಇಂದು (ಅ.12) ಏರ್ಟೆಲ್ ಗ್ರಾಹಕರಿಗೆ ಮೊದಲು ಅಲರ್ಟ್ ಬಂದಿದೆ. ಕೆಲ ಹೊತ್ತಿನ ಬಳಿಕ ಜಿಯೋ ಬಳಕೆದಾರರಿಗೆ ಅಲರ್ಟ್ ಬಂದಿದೆ. ಬಳಿಕ ವೊಡಾಫೋನ್ ಐಡಿಯಾ ಸಿಮ್ ಹೊಂದಿರುವವರಿಗೆ ಟೆಸ್ಟಿಂಗ್ ಅಲರ್ಟ್ ಸಂದೇಶ ಸಿಕ್ಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….