ದೊಡ್ಡಬಳ್ಳಾಪುರ, (ಆ. 20): ಸರಗಳ್ಳತನ, ಮೇಕೆ- ಕುರಿ ಕಳವು ತಡೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುನಿಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ತಾಲೂಕಿನ ಮೆಳೇಕೋಟೆ, ತೂಬಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಫೂಟ್ ಪೆಟ್ರೋಲಿಂಗ್ ನಡೆಸಿದರು.
ಈ ವೇಳೆ ಗ್ರಾಮಸ್ಥರೊಂದಿಗೆ ಮಾತಕತೆ ನಡೆಸಿದ ಅವರು, ಸರಗಳ್ಳತನ ತಡೆ ಕುರಿತಂತೆ ಮಹಿಳೆಯರಿಗೆ ಅರಿವು, ಕುರಿ – ಮೇಕೆಗಳ ರಕ್ಷಣೆಗೆ ರೈತರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಜೂಜಾಟದಲ್ಲಿ ಭಾಗಿಯಾಗದಂತೆ ಎಚ್ಚರಿಕೆ, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿ ಪ್ರಯಾಣಿಸುವುದು ಸೇರಿದಂತೆ ಅನೇಕ ಅಪರಾಧ ತಡೆ ವಿಚಾರಗಳನ್ನು ವಿವರಿಸಿದರು.
ಈ ವೇಳೆ ಎಎಸ್ವೈ ಕೃಷ್ಣಪ್ಪ, ಸಿಬ್ಬಂದಿಗಳಾದ ವೆಂಕಟೇಶ್, ಅಭಿಷೇಕ್, ರಮೇಶ್, ರಂಗನಾಥ್, ಶ್ರೀನಿವಾಸ್, ಲಕ್ಷ್ಮೀಪತಿ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….