ನೆಲಮಂಗಲ, (ಆ.20): ಆಗಸ್ಟ್ 15 ರಾಷ್ಟ್ರದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ ನಡೆಯುತ್ತಿತ್ತು, ಪೊಲೀಸರು ಸಹ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರು, ಆಗಲೆ ನೆಲಮಂಗಲ ಪೊಲೀಸರಿಗೆ ಕಿಡ್ನ್ಯಾಪ್ ಪ್ರಕರಣದ ಮಾಹಿತಿ ಬಂದಿತ್ತು, ಗಾಬರಿಯಿಂದ ದೌಡಾಯಿಸಿದ ಪೊಲೀಸರು ತನಿಖೆ ನಡೆಸಿ ಅದೊಂದು ಕಿಡ್ಯಾಪ್ ಪ್ಲಾನ್ ಅನ್ನೋದನ್ನ ಭೇದಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲವೇ ಬೆಚ್ಚಿಬಿದ್ದಿದ್ದ ಬಾಲಕಿ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಸ್ವಾತಂತ್ರ್ಯ ದಿನದಂದು ಬಿಹಾರ ಮೂಲದ ಬಾಲಕಿ ರಾಣಿ (ಹೆಸರು ಬದಲಿಸಲಾಗಿದೆ) ಕಣ್ಮರೆಯಾಗಿದ್ದಳು.
ಯುವತಿ ಸ್ನೇಹಿತೆ ಮನೆಗೆ ಹೋಗಿದ್ದಾಗ 4ಜನ ಸೇರಿ ಕಿಡ್ನಾಪ್ ಮಾಡಿದ್ದಾರೆ. ಅಡ್ರೆಸ್ ಕೇಳುವ ನೆಪದಲ್ಲಿ ಕಾರಿನಲ್ಲಿ ಅಪಹರಣ ನಡೆದಿದೆ ಎಂದು ನೆಲಮಂಗಲ ನಗರದ ಠಾಣೆಗೆ ಯುವತಿಯ ಅಕ್ಕ ಪೂರ್ವಿಶಾ ಕುಮಾರಿ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಾಗುತ್ತಲೇ ಇನ್ಸ್ಪೆಕ್ಟರ್ ಶಶಿಧರ್ ನೇತ್ರತ್ವದಲ್ಲಿ ಪೊಲೀಸರು ಯುವತಿ ತಲಾಶ್ ನಡೆಸಲು ಆರಂಭಿಸಿದರು. ಈ ವೇಳೆ ಬೆಳಕಿಗೆ ಬಂದದ್ದೆ ಪ್ರಿಯಕರನ ಜೊತೆ 16 ವರ್ಷದ ರಾಣಿ ಪರಾರಿಯಾಗಿದ್ದ ವಿಷಯ.
ನೆಲಮಂಗಲದಿಂದ ಲಾಸ್ಟ್ ಬಸ್ ಹತ್ತಿ ಯಶವಂತಪುರ ಬಸ್ ನಿಲ್ದಾಣಕ್ಕೆ ಯುವತಿ ಬಂದಿದ್ಲು, ಯುವತಿಗಾಗಿ ಕಾದಿದ್ದ ಕುಳಿತಿದ್ದ ಯುವಕ ರೇಜ ಅಲ್ಲಿಂದ ಮತ್ತೊಂದು ಬಸ್ ಹತ್ತಿ ಮೆಜೆಸ್ಟಿಕ್ ಬಂದಿದ್ರು, ಮೆಜೆಸ್ಟಿಕ್ ನಿಂದ ಮಂಡ್ಯ ಬಳಿಯ ಮದ್ದೂರಿಗೆ ಪ್ರಯಾಣ ಬೆಳಸಿ, ಮದ್ದೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ನೆಲಮಂಗಲ ಟೌನ್ ಪೊಲೀಸರು ಮೊಬೈಲ್ ಟವರ್ ಅಧಾರದ ಮೇಲೆ ಜೋಡಿಗಳನ್ನ ಪತ್ತೆ ಹಚ್ಚಿ, ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….