ಬೆಂಗಳೂರು, (ಆ.21): ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಜರ್ನಿ ಕುರಿತು ಹಗುರವಾಗಿ ಮಾತನಾಡಿದ್ದ ತಮಿಳು ನಟ ಜೈ ಆಕಾಶ, ಯಶ್ ಅಭಿಮಾನಿಗಳ ತಿರುಗಿ ಬಿದ್ದ ಬೆನ್ನಲ್ಲೇ ಇದೀಗ ಕ್ಷಮೆ ಯಾಚಿಸಿದ್ದಾರೆ.
ಯಶ್ ತನಗೆ ಸಿನಿಮಾ ಅವಕಾಶ ಇಲ್ಲವೆಂದು ನನ್ನ ಬಳಿ ಕಣ್ಣೀರಿಟ್ಟಿದ್ದರು. ನಾನು ಯಶ್‌ಗೆ ಊಟ ಹಾಕಿ ಕಳಿಸಿದ್ದೆ ಎಂದು ಚೈ ಆಕಾಶ್ ಹೇಳಿಕೊಂಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಜೈ ಆಕಾಶ್, ಯಶ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.
ನಾನು ಯಶ್ ಜಂಬದ ಹುಡುಗಿ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ ನನ್ನ ತಮ್ಮನಾಗಿ ಯಶ್ ಸಿನಿಮಾದಲ್ಲಿ ನಟಿಸಿದ್ರು. ಪತ್ರಕರ್ತರ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವ ಅವಸರದಲ್ಲಿ ಏಕವಚನದಲ್ಲಿ ಮಾತಾಡ್ಡಿಟ್ಟೆ ಬಳಿಕ ಆ ವಿಡಿಯೋನ ಹೀಗೆ ಕಟ್ ಮಾಡಿ ವೈರಲ್ ಮಾಡಿದ್ದಾರೆ ಎಂದಿದ್ದಾರೆ.
ಯಶ್ ನ್ಯಾಷನಲ್ ಸ್ಟಾರ್ ಅವರ ಬಗ್ಗೆ ನಾನು ಆ ರೀತಿ ಮಾತಾಡಬಾರದಿತ್ತು ಎಂದು ನನಗೆ ಮನವರಿಕೆ ಆಗಿದೆ. ಯಶ್ ನನಗೆ ತಮ್ಮನಂತೆ ಆದರೂ ನಾನು ಯಶ್ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಆದ್ದರಿಂದ ನಾನು ಯಶ್ ಹಾಗು ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ದಯವಿಟ್ಟು ನನ್ನ ಕ್ಷಮಿಸಿ ಎಂದು ನಟ ಜೈ ಆಕಾಶ್ ಕ್ಷಮೆ ಯಾಚಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….