ದೊಡ್ಡಬಳ್ಳಾಪುರ, (ಡಿ.28): ಚಿರತೆಗಳು ತಾಲೂಕಿನಲ್ಲಿ ಪದೇ ಪದೇ ಸಾರ್ವಜನಿಕವಾಗಿ ವಲಸೆ ನಡೆಸುತ್ತಿರುವುದರಿಂದ ಜನತೆ ಆತಂಕಕ್ಕೆ ಒಳಾಗುತ್ತಿದ್ದಾರೆ.
ಸೋಮವಾರ ರಾತ್ರಿಯಷ್ಟೇ ಕೊನಘಟ್ಟ ಬಳಿ ಕಂಡುಬಂದಿದ್ದ ಎರಡು ಚಿರತೆಗಳು, ಬುಧವಾರ ಬೆಳಗ್ಗೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಕುರುಬರಹಳ್ಳಿ ಸಮೀಪದ ತಳಗವಾರ ರಸ್ತೆ ಕಂಡುಬಂದಿವೆ.
ಪ್ರತ್ಯಕ್ಷದರ್ಶಿ ಕಾಂಗ್ರೆಸ್ ಯುವ ಮುಖಂಡ ತಳಗವಾರ ಪುನೀತ್ ಈ ಕುರಿತಂತೆ ಮಾಹಿತಿ ನೀಡಿದ್ದು, ಕುರುಬರಹಳ್ಳಿ ಸಮೀಪದ ತಳಗವಾರ ರಸ್ತೆಯ ಕೃಷಿಹೊಂಡದ ಬಳಿ ಎರಡು ಚಿರತೆಗಳು ಸಾಗುತ್ತಿದ್ದವು.. ವಾಕಿಂಗ್ ತೆರಳಿದ್ದ ಕಾರಣ ಮೊಬೈಲ್ ಇರದೆ ಪೊಟೋ ತೆಗೆಯಲಾಗಲಿಲ್ಲ. ಆದರೆ ಒಂದು ಚಿರತೆ ನನ್ನ ಗಮನಿಸಿದ್ದು ಆತಂಕವಾಯಿತು. ಈ ವ್ಯಾಪ್ತಿಯ ಜನ – ಜಾನುವಾರುಗಳು ತೊಂದರೆಗೀಡಾಗುವ ಮುನ್ನಾ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳೆದ ಕೆಲದಿನಗಳಿಂದ ತಾಲೂಕಿನಲ್ಲಿ ಘಾಟಿ ಸುಬ್ರಹ್ಮಣ್ಯ ರಸ್ತೆ, ಕೊನಘಟ್ಟ ಜಮೀನಿನಲ್ಲಿ ಹೆಜ್ಜೆ ಗುರುತು, ಕೊನಘಟ್ಟ ಯುವಕನ ಮೇಲೆ ದಾಳಿಗೆ ಯತ್ನ. ಇದೀಗ ನಗರಕ್ಕೆ ಹೊಂದಿಕೊಂಡಂತಿರುವ ಕುರುಬರಹಳ್ಳಿ ಬಳಿ ಚಿರತೆಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿ ಮುನಿರಾಜ್ ಅವರು ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿದ್ದು, ಚಿರತೆಗಳು ಒಂದೇ ಸಮ ವಲಸೆ ನೆಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಕಂಡು ಬರುತ್ತವೆ. ಚಿರತೆ ಸೆರೆಗೆ ಕೊನಘಟ್ಟದ ಬಳಿ ಬೋನ್ ಅಳವಡಿಕೆಗೆ ಕ್ರಮಕೈಗೊಳ್ಳಲಾಗಿದ್ದು, ಈ ಕೂಡಲೇ ತಳಗವಾರ ರಸ್ತೆಗೆ ಸಿಬ್ಬಂದಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದು ಎಂದರು.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಪೊಟೋ by: ರಾಜು ಬಾಶೆಟ್ಟಿಹಳ್ಳಿ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….