ಶಿವಮೊಗ್ಗ: ತಂದೆ ಹಾಗೂ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಶಿಕಾರಿಪು ರದಲ್ಲಿ ನಡೆದಿದೆ.
ಮುಸ್ತಾಫ ಬೇಗ್ (42 ವರ್ಷ) ಕೊಲೆ ಯಾದ ವ್ಯಕ್ತಿ. ಆತನ ಮಗ ಶಾಹಿದ್ ಬೇಗ್ ಆರೋಪಿ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಭಾನುವಾರ ರಾತ್ರಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಸುತ್ತಿಗೆಯಿಂದ ಶಾಹೀದ್ ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ. ಇದರಿಂದ ಮುಸ್ತಾಫ ಬೇಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.