ಶ್ರೀಕಾಕುಳಂ (ಆಂದ್ರಪ್ರದೇಶ); ಭಾರತೀಯ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹಣ ತೆಗೆದುಕೊಂಡಿರುವ ಇಂಡಿಯನ್ ಆರ್ಮಿ ಕಾಲಿಂಗ್ ಕಂಪನಿಯ ಸಂಸ್ಥಾಪಕರು ಯುವಕರಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿರುವ ವಿಡಿಯೋ (video) ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀಕಾಕುಳಂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಭೂಸೇನೆ, ನೌಕಾಪಡೆ, ವಾಯುಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 5,00,000ದಿಂದ 10,00,000 ರೂ.ವರೆಗೆ ಹಣ ಪಡೆದು ವಂಚಿಸಿರು ಆರೋಪ ಇಂಡಿಯನ್ ಆರ್ಮಿ ಕಾಲಿಂಗ್ ಕಂಪನಿ ಸಂಸ್ಥಾಪಕ ಹಾಗೂ ಅಧ್ಯಕ್ಷ ಬಸವ ರಮಣ ವಿರುದ್ಧ ಕೇಳಿ ಬಂದಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ https://twitter.com/TeluguScribe/status/1864770621114323218?t=vsvr4yBvEb_-29Z4byU1AQ&s=19
ಯುವಕರಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.