ರಾಯಚೂರು, (Mantralayam): ಸಾಲುಸಾಲು ರಜೆಗಳಿಂದಾಗಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತಸಾಗರ ಹರಿದುಬಂದಿದೆ.
ಕ್ರಿಸ್‌ಮಸ್ ರಜೆ, ಹೊಸ ವರ್ಷಾಚರಣೆಗೆ ದಿನಗಣನೆ, ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಯರ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಸಾವಿರಾರು ಭಕ್ತರ ಭೇಟಿಯಿಂದ ರಾಯರ ಮಠ ತುಂಬಿ ತುಳುಕುತ್ತಿದ್ದು, ಮಠದ ವಸತಿಗೃಹಗಳಿಗೆ ಆನ್ ಲೈನ್ ಬುಕಿಂಗ್ ಸ್ಥಗಿತಗೊಳಿಸಲಾಗಿದೆ.
ಕೇವಲ ಆಫ್‌ಲೈನ್ ಬುಕಿಂಗ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಭಕ್ತರು ಕೋಣೆಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.