ದೊಡ್ಡಬಳ್ಳಾಪುರ: ನಗರದ ರಸ್ತೆಗಳಲ್ಲಿನ ಗುಂಡಿಗಳಿಗೆ ತ್ವರಿತವಾಗಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಶ್ರೀ ಭುವನೇಶ್ವರಿ ಕನ್ನಡ ಸಂಘದವತಿಯಿಂದ ಪ್ರತಿಭಟನೆ ನಡೆಸಿದ ಘಟನೆ ಭುವನೇಶ್ವರಿನಗರದ ರಸ್ತೆ ಬಳಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ವಿ.ನವೀನ್ ದೇವ್, ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. 31 ವಾರ್ಡ್ ಗಳಿಂದ ಕೂಡಿದ 1.2 ಲಕ್ಷ ಜನ ನಗರದಲ್ಲಿ ವಾಸವಾಗಿದ್ದು ತಾಲೂಕಿನ ಕೇಂದ್ರ ಬಿಂದುವಾಗಿದೆ. ರಾಜ್ಯದ ರಾಜಧಾನಿ ಸಮೀಪವಿದ್ದರೂ ಮೂಲ ಸೌಲಭ್ಯವಾದ ರಸ್ತೆ ಕಾಮಗಾರಿ ಕಾಣದ ರಸ್ತೆಗಳು ಸ್ವಿಮ್ಮಿಂಗ್ ಪೂಲ್ ಗಾಳಾಗಿವೆ ಮಾರ್ಪಟ್ಟಿವೆ.
ನಗರದ ,ರುಮಾಲೆ ಛತ್ರದಿಂದ ತೇರಿನ ಬೀದಿವರೆಗೆ, ಸಿದ್ದಲಿಂಗಯ್ಯ ವೃತ್ತದಿಂದ ಪಂಪ್ ಹೌಸ್ ವರೆಗೆ, ಕಾಳಮ್ಮ ದೇವಸ್ಥಾನದಿಂದ ತೇರಿನಬೀದಿವರೆಗೆ, ಕೊಂಗಾಡಿಯಪ್ಪ ಕಾಲೇಜಿನಿಂದ ಕುಚ್ಚಪ್ಪನಪೇಟೆ, ವೇಣುಗೋಪಾಲಸ್ವಾಮಿ ದೇವಸ್ಥಾನದ ವರೆಗೆ, ಪ್ರೀತಿ ವೈನ್ಸ್ ಇಂದ ಅಂಜಿನಪ್ಪ ಸಿಲ್ಕ್ಸ್ ವರೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಸಂಚರಿಸು ಅಸಾಧ್ಯವಾಗಿದ್ದು ಕೂಡಲೆ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನವೀನ್, ಚೌಡರಾಜು,ಅಂಜಿನಪ್ಪ, ಕೆಂಪರಾಜು, ಮಹೇಶ್, ಅರ್ಜುನ್, ಕೃಷ್ಣಪ್ಪ, ಯೋಗೇಶ್, ಅಬ್ಬಾಸ್, ಅಂಬರೀಶ್ ಮತ್ತಿತರಿದ್ದರು.

