ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ ರಾಗಿ ಪೈರು ಹುಲುಸಾಗಿ ಬೆಳೆದಿರುವ ಕಾರಣ ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ರಾಗಿ ಬೆಳವಣಿಗೆಯ ವಿವಿಧ ಹಂತಗಳಾದ ಬಿತ್ತನೆ, ಬೆಳವಣಿಗೆ, ಕಾಳು ಕಟ್ಟುವುದು ಈ ಮೂರು ಹಂತಗಳಲ್ಲಿಯೂ ಮಳೆಯ ಸಮಸ್ಯೆಯಿಲ್ಲದೇ ಉತ್ತಮವಾಗಿ ನೀರಿನ ಪೂರೈಕೆಯಾಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಬೆಳೆಯು ರೈತರ ಕೈಗೆಟುಕುವ ನಿರೀಕ್ಷೆಯಿದೆ.
ತಾಲ್ಲೂಕಿನಾದ್ಯಂತ 11,064 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. ಕಸಬಾ ಹೊಬಳಿಯಲ್ಲಿ 2260, ಸಾಸಲು 3852, ಮಧುರೆ 1755, ಸಾಸಲು 1477, ದೊಡ್ಡಬೆಳವಂಗಲ 1720 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 32ಎಂಎಂ ಮಳೆ
ತಾಲೂಕಿನಲ್ಲಿ ಮಂಗಳವಾರ ಅಂತ್ಯದ ವೇಳೆಗೆ ತಾಲೂಕಿನಲ್ಲಿ 32ಎಂಎಂ ಮಳೆಯಾಗಿದೆ.
ಹೋಬಳಿವಾರು ಸಾಸಲು – 26ಎಂಎಂ, ತೂಬಗೆರೆ – 24ಎಂಎಂ, ಮಧುರೆ – 37ಎಂಎಂ, ಕಸಬ – 38ಎಂಎಂ, ದೊಡ್ಡಬೆಳವಂಗಲ – 34ಎಂಎಂ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ತಿಳಿಸಿದ್ದಾರೆ.
ಉಳಿದಂತೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೆಲವೆಡೆ ರಾಗಿ ಬೆಳೆನೆಲಕಚ್ಚಿದೆ.

