ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶದ ಬೆನ್ನಲ್ಲೆ ಗೋಹತ್ಯೆ ನಿಷೇಧಿಸುವಂತೆ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಚಿವರು, ಸಂಸದರನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರವಾದ ಒತ್ತಡ ಹೇರಲಾರಂಭಿಸಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಕುರಿತಂತೆ ನೆಟ್ಟಿಗರು ಒಂದು ಅಭಿಯಾನವನ್ನೇ ಆರಂಭಿಸಿದ್ದಾರೆ. ಆಳುವ ಪಕ್ಷದ ಪ್ರಮುಖ ನಾಯಕರುಗಳು ಟ್ವೀಟ್ ಮಾಡಿದಾಗ, ಫೇಸ್‌ಬುಕ್ ಪೋಸ್ಟ್ ಹಾಕಿದಾಗ ಅಲ್ಲಿಗೆಲ್ಲಾ ಹೋಗಿ ‘ಕೊಟ್ಟ ಮಾತನ್ನು ಈಡೇರಿಸಿ, ಗೋಹತ್ಯೆ ನಿಷೇಧಿಸಿ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
muqtar ali abbas ಎನ್ನುವವರು ಆರಂಭಿಸಿರುವ ಈ ಅಭಿಯಾನ. ತೀವ್ರ ಸ್ವರೂಪ ಪಡೆದಿದ್ದು, ಕಾಳಿಮಠದ ಋಷಿ ಕುಮಾರ ಸ್ವಾಮಿಜಿ ಸಹ ತೀವ್ರ ಒತ್ತಡ ಹೇರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಚಿವ, ಸಂಸದರ ಖಾತೆಗಳಿಗ ತೆರಳಿ ಮುಖವಾಡ ಧರಿಸಿಕೊಂಡು ಗೋಮಾತೆಯ ಹೆಸರಿನಲ್ಲಿ, ಹಿಂದುತ್ವದ ಹೆಸರಿನಲ್ಲಿಅಧಿಕಾರ ಮಾಡುತ್ತಿರುವ ಬಿಜೆಪಿ ನಾಯಕರೇ.ನಿಮ್ಮ ಮುಖವಾಡವನ್ನು ಕಳಚಿ ಬಿಡಿ. ಈ ಕೂಡಲೇ ಗೋಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೆ ತನ್ನಿ ಎಂದು ನೆಟ್ಟಿಗರು ಜಾಡಿಸುತ್ತಿದ್ದು, ಅಭಿಯಾನ ತೀವ್ರ ಸ್ವರೂಪ ಪಡೆಯುವ ಮೂಲಕ ಬಿಜೆಪಿ ಪಕ್ಷದ ಸಚಿವರು, ಸಂಸದರನ್ನು ಬಸವಳಿಯುವಂತೆ ಮಾಡಿದೆ.
ಈ ಅಭಿಯಾನದ ಬಿಸಿ ಸಂಸದ ಪ್ರತಾಪ್ ಸಿಂಹರಿಗೆ ತಟ್ಟಿದ್ದು, ಗೋಹತ್ಯೆ ನಿಷೇಧದ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ನನ್ನ ಭಾವನೆಯನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಸಾಹೇಬ್ರಿಗೆ ಸಧ್ಯದಲ್ಲೇ ತಿಳಿಸುತ್ತೇನೆ. ಫೇಸ್ಬುಕ್ ಕಾಮೆಂಟ್ ಬಾಕ್ಸ್ ನಲ್ಲಿನ ಹೋರಾಟ ಸಾಕು ಪ್ಲೀಸ್ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ ಬಿಜೆಪಿ ಪಕ್ಷದ ಪ್ರಣಾಳಿಯಲ್ಲಿದ್ದ ಗೋಹತ್ಯೆ ನಿಷೇಧದ ಕುರಿತು ಆರಂಭವಾಗಿರುವ ಅಭಿಯಾನದ ಅಬ್ಬರಕ್ಕೆ ಸಚಿವರು, ಸಂಸದರು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮದ ಪೊಸ್ಟ್ ಹಾಕಲು ಭಯಪಡುವಂತೆ ಮಾಡಿದೆ.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

