ಬೆಂಗಳೂರು: ಭಾರತದ ಚುನಾವಣಾ ಆಯೋಗದ ದಿನಾಂಕ: 21.08.2020ರ ಪತ್ರದ ನಿರ್ದೇಶನದಂತೆ ಕರ್ನಾಟಕ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2021ರ ಪ್ರಯುಕ್ತ ವೇಳಾಪಟ್ಟಿಯಂತೆ ಮತದಾರರ ಪಟ್ಟಿಗಳ ಕರಡನ್ನು ಪ್ರಕಟಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ 178-ಹೊಸಕೋಟೆ, 179-ದೇವನಹಳ್ಳಿ, 180-ದೊಡ್ಡಬಳ್ಳಾಪುರ, 181-ನೆಲಮಂಗಲ ವ್ಯಾಪ್ತಿಯಲ್ಲಿ ಪ್ರತಿ ಮತಗಟ್ಟೆಗಳ ಬಿಎಲ್‍ಓಗಳ ಕಚೇರಿಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಕಚೇರಿಯಲ್ಲಿ ಪರಿಶೀಲಿಸಬಹುದಾಗಿದೆ.
ಅರ್ಹತಾ ದಿನಾಂಕ: 01.01.2021 ರಂತೆ 18.11.2020ರ ಬುಧವಾರದಂದು ಮತದಾರರ ಪಟ್ಟಿಗಳ ಕರಡನ್ನು ಪ್ರಕಟಗೊಳಿಸಲಾಗಿದ್ದು, ಹಕ್ಕು ಆಕ್ಷೇಪಣೆ, ತಿದ್ದುಪಡಿ ಅರ್ಜಿಗಳನ್ನು ದಿನಾಂಕ: 18.11.2020ರ ಬುಧವಾರದಿಂದ 17.12.2020ರ ಗುರುವಾರದವರೆಗೆ ಸ್ವೀಕರಿಸಲಾಗುವುದು.
ಹಕ್ಕು ಆಕ್ಷೇಪಣೆ, ತಿದ್ದುಪಡಿ ಅರ್ಜಿಗಳನ್ನು ಸ್ವೀಕರಿಸಲು ದಿನಾಂಕ: 22.11.2020ರ ಭಾನುವಾರ, 29.11.2020ರ ಭಾನುವಾರ, 06.12.2020ರ ಭಾನುವಾರ ಮತ್ತು 13.12.2020ರ ಭಾನುವಾರದಂದು ವಿಶೇಷ ಆಂದೋಲನ ನಡೆಸಲಾಗುವುದು ಹಾಗೂ ದಿನಾಂಕ: 18.01.2021ರ ಸೋಮವಾರದಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆಯನ್ನು ಪ್ರಕಟಿಸಲಾಗುವುದು.
ದಿನಾಂಕ: 01.01.2021ಕ್ಕೆ 18 ವರ್ಷ ಪೂರೈಸುವ ಹಾಗೂ ಎಲ್ಲಾ ಅರ್ಹ ಮತದಾರರ ಹೆಸರನ್ನು ನೋಂದಾಯಿಸುವುದು, ಮೃತ ಹೊಂದಿರುವ ಹಾಗೂ ಖಾಯಂ ವಾಸಿಗಳಲ್ಲದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು, ಮತದಾರರ ವಿವರಗಳ ನಮೂದಿನಲ್ಲಿರುವ ಎಲ್ಲಾ ಭಾಷೆಗಳಲ್ಲಿನ ತಪ್ಪುಗಳನ್ನು ಸರಿಪಡಿಸುವುದು, ಅನಿವಾಸಿ ಭಾರತೀಯ ಮತದಾರರನ್ನು/ನೋಂದಾಯಿಸದ ಭಾರತೀಯ ಪ್ರಜೆಗಳನ್ನು ಗುರುತಿಸುವುದು ವಿಶೇಷ ಆಂದೋಲನದ ಮುಖ್ಯ ಉದ್ದೇಶಗಳಾಗಿವೆ.
ಈ ವಿಶೇಷ ಪರಿಷ್ಕರಣೆಯ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ 178-ಹೊಸಕೋಟೆ, 179-ದೇವನಹಳ್ಳಿ, 180-ದೊಡ್ಡಬಳ್ಳಾಪುರ, 181-ನೆಲಮಂಗಲ ವ್ಯಾಪ್ತಿಯಲ್ಲಿ ಪ್ರತಿ ಮತಗಟ್ಟೆಗಳ ಬಿಎಲ್‍ಓಗಳಿಗೆ ಅವರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯ ಪ್ರತಿಯನ್ನು ಒದಗಿಸಲಾಗಿದ್ದು, ಅರ್ಹ ಭಾರತೀಯ ಪ್ರಜೆಗಳು ಮತದಾರರ ಪಟ್ಟಿಗೆ ನಮೂನೆ-6 ಭರ್ತಿ ಮಾಡಿ ಸರಿಪಡಿಸಿಕೊಳ್ಳುವ ಹಾಗೂ ಈಗಾಗಲೇ ಇರುವ ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದಲ್ಲಿ ನಮೂನೆ-8 ಭರ್ತಿ ಮಾಡಿ ಸರಿಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದ್ದು, ನಿಮ್ಮ ಕುಟುಂಬದ ಯಾವುದೇ ವ್ಯಕ್ತಿಯು ಭರ್ತಿ ಮಾಡಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಹಕರಿಸಿ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ

