ಬೆಂಗಳೂರು: ಮುಂದಿನ ಮೂರು ವಾರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಿಸಲು ಉಚ್ಛ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ.
ದೊಡ್ಡಬಳ್ಳಾಪುರ ತಾಲೂಕಿನ 26 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿತಲೇಖನಿಗೆ ದೊರೆತಿರುವ ಆದೇಶದ ಪ್ರತಿಯಂತೆ. ರಾಜ್ಯ ಚುನಾವಣೆ ಆಯೋಗದ ಆದೇಶದಂತೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಸೂಚನೆ ಮೇರೆಗೆ ಕರ್ನಾಟಕ ಪಂಚಾಯತ್ ರಾಜ್ ( ಚುನಾವಣೆ ನಡೆಸುವ) ನಿಯಮಗಳ ಅಧಿಕಾರ ಬಳಸಿ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ.
ಚುನಾವಣೆ ಅಧಿಕಾರಿಗಳು ನೇಮಕವಾಗಿರುವ ಗ್ರಾಮಪಂಚಾಯಿತಿಗಳು: ಆರೂಢಿ, ಕಂಟನಕುಂಟೆ, ಕನಸವಾಡಿ, ಕಾಡನೂರು, ಕೆಸ್ತೂರು, ಕೊಡಿಗೇಹಳ್ಳಿ, ಕೊನಘಟ್ಟ, ಚನ್ನಾದೇವಿ ಅಗ್ರಹಾರ, ತೂಬಗೆರೆ, ದೊಡ್ಡತುಮಕೂರು, ದೊಡ್ಡಬೆಳವಂಗಲ, ಬಾಶೆಟ್ಟಿಹಳ್ಳಿ, ಭಕ್ತರಹಳ್ಳಿ, ಮೇಲಿನಜೋಗಹಳ್ಳಿ, ಮೇಳೆಕೋಟೆ, ರಾಜಘಟ್ಟ, ಸಕ್ಕರೆಗೊಲ್ಲಹಳ್ಳಿ, ತಿಪ್ಪೂರು, ಸಾಸಲು, ಹಣಬೆ, ಹಾಡೋನಹಳ್ಳಿ, ಹಾದ್ರಿಪುರ, ಹುಲಿಕುಂಟೆ, ಹೆಗ್ಗಡಿಹಳ್ಳಿ, ಹೊನ್ನಾವರ, ಹೊಸಹಳ್ಳಿ.
ಈ ಗ್ರಾಮಪಂಚಾಯಿತಿಗಳಿಗೆ ನೇಮಕವಾಗಿರುವ ಚುನಾವಣೆ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ರಾಜ್ಯ ಚುನಾವಣೆ ಆಯೋಗ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ನೀಡುವ ನಿರ್ದೇಶನದಂತೆ ಚುನಾವಣೆ ಪ್ರಕ್ರಿಯೆ ನಿರ್ವಹಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

