ದೊಡ್ಡಬಳ್ಳಾಪುರ: ಗೂಡ್ಸ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಪಿಎಸ್ಐ ಜಗದೀಶ್ ವೃತ್ತದಲ್ಲಿ ಸಂಭವಿಸಿದೆ.
ಮೃತನನ್ನು ಹಣಬೆ ನಿವಾಸಿ ಹೇಮಂತ್(19) ಎಂದು ಗುರುತಿಸಲಾಗಿದ್ದು, ಬೆಂಗಳೂರಿನಿಂದ ಊರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜಶ್ರೀ ಕಫರ್ಟ್ ಬಳಿಯಿರುವ ಪಿಎಸ್ಐ ಜಗದೀಶ್ ವೃತ್ತ ಅವೈಜ್ಞಾನಿಕವಾಗಿರುವುದರಿಂದ ಅಪಘಾತ ಹೆಚ್ಚಾಗುತ್ತಿದ್ದರು ಟೋಲ್ ಸಂಗ್ರಹ ಮಾಡುವವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ರಾಜ್ಯ ಹೆದ್ದಾರಿ-9 ರಲ್ಲಿ ಹಾದು ಹೋಗುವ ಯಲಹಂಕ-ಹಿಂದೂಪುರ ರಸ್ತೆಯನ್ನು ಯಲಹಂಕದಿಂದ ಆಂಧ್ರಪ್ರದೇಶದ ಗಡಿ ಭಾಗದವರೆಗೆ ಸುಮಾರು 380.5 ಕೋಟಿ ವೆಚ್ಚದಲ್ಲಿ 73.35 ಕಿ.ಮೀನಷ್ಟು ಅಭಿವೃದ್ಧಿ ಪಡಿಸಲಾಗುತ್ತಿದೆ. ಯಲಹಂಕದಿಂದ ದೊಡ್ಡಬಳ್ಳಾಪುರದ ನಡುವೆ 24.3 ಕಿ.ಮೀ. ನಾಲ್ಕು ಪಥದರಸ್ತೆ, ಮತ್ತು ದೊಡ್ಡಬಳ್ಳಾಪುರದಿಂದ ಆಂಧ್ರದ ಗಡಿ ಭಾಗದವರೆಗೆ ಎರಡು ಪಥದ ರಸ್ತೆಯನ್ನು ನಿರ್ಮಿಸುವ ಒಪ್ಪಂದವನ್ನು ರಾಮಲಿಂಗಂ ಕನ್‌ಸ್ಟ್ರಕ್ಷ ನ್ಸ್ ಸಂಸ್ಥೆಯೊಡನೆ ಸರಕಾರ ಮಾಡಿಕೊಂಡಿದೆ. 2014 ರಲ್ಲಿ ನಡೆದಿರುವ ಒಪ್ಪಂದದ ಕಾಮಗಾರಿ ಆರು ವರ್ಷ ಕಳೆದರೂ ಸಹ ಪೂರ್ಣಗೊಂಡಿಲ್ಲ, ಆದರೆ 2018 ಸೆಪ್ಟಂಬರ್ ನಿಂದಲೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

