ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಎಂಸಿಎಸ್) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದೆ.
ತಹಶೀಲ್ದಾರ್ ಹಾಗೂ ಚುನಾವಣೆ ಅಧಿಕಾರಿ ಟಿ.ಎಸ್.ಶಿವರಾಜ್ ಸಮ್ಮುಖದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಡಿ.ಸಿದ್ದರಾಮಯ್ಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿ ಅಭ್ಯರ್ಥಿ ಚಂದ್ರಕಲಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ನಾಮ ಪತ್ರ ಸಲ್ಲಿಕೆ ಆರಂಭವಾಗಿದ್ದು, 11 ಗಂಟೆವರೆಗೆ ನಾಮ ಪತ್ರಗಳನ್ನು ವಾಪಸು ಪಡೆಯಲು ಅವಕಾಶ ನೀಡಲಾಗಿತ್ತು.
13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ 6 ಜನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, 5 ಜನ ಜೆಡಿಎಸ್, 1 ಬಿಜೆಪಿ ಹಾಗೂ 1 ಜೆಡಿಎಸ್ ಭಿನ್ನ ಮತೀಯ ಬಣದ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮುಖಂಡ ಕನ್ನಮಂಗಲ ಸಿದ್ದರಾಮಣ್ಣ ಅವರನ್ನು ಸರ್ಕಾರ ಗುರುವಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮತಚಲಾಯಿಸುವ ಹಕ್ಕನ್ನು ನಾಮ ನಿರ್ದೇಶಕ ಸದಸ್ಯ ಹಾಗೂ ಸರ್ಕಾರಿ ಅಧಿಕಾರಿ ಸೇರಿದಂತೆ 15 ಜನ ಹಕ್ಕು ಹೊಂದಿದ್ದರು.
ಹೊಂದಾಣಿಕೆ: 30 ತಿಂಗಳು ಕಾಂಗ್ರೆಸ್, 20 ತಿಂಗಳು ಜೆಡಿಎಸ್ ಹಾಗೂ ಕೊನೆಯ 10 ತಿಂಗಳು ಬಿಜೆಪಿ ಅಭ್ಯರ್ಥಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಒಡಂಬಡಿಕೆಯಾಗಿದೆ ಎಂದು ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ

