ದೊಡ್ಡಬಳ್ಳಾಪುರ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನವೆಂಬರ್ 22 ರಂದು ನಗರ ಉಪ- ವಿಭಾಗ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆಯ 5.30ರವೆರೆಗೆ ವಿದ್ಯುತ್ ಸರಬರಾಜು ಅಡಚಣೆಯಾಗಲಿದೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಬೆವಿಕಂ ನಗರ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರೋಹಿತ್, ಡಿ.ಕ್ರಾಸ್ ಸಮೀಪದ ವಿದ್ಯುತ್ ಪ್ರಸರಣಾ ಕೇಂದ್ರದ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ನಗರದ ಕುಚ್ಚಪ್ಪನಪೇಟೆ, ವೀರಭದ್ರನಪಾಳ್ಯ, ಚೈತನ್ಯನಗರ, ಕನಕದಾಸ ರಸ್ತೆ, ತೇರಿನಬೀದಿ, ಭುವನೇಶ್ವರಿ ನಗರ, ತಿಪ್ಪಾಪುರ, ಸಂಜಯನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

