ವಿಜಯಪುರ: ‘ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರೋಲ್‌ಕಾಲ್ ಹೋರಾಟಗಾರರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಮುಖ್ಯಮಂತ್ರಿಗಳು ಹೆದರಬೇಕಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕನ್ನಡ ಪರ ಸಂಘಟನೆಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡಿಗರ ಮತಗಳು ಹೋಗುತ್ತವೆ ಎಂಬ ಭಯ ಬೇಡ. ಮುಖ್ಯಮಂತ್ರಿ ಅವರು ಮರಾಠಾ ಸಮಾಜದ ಅಭಿವೃದ್ಧಿ ಪ್ರಾಧಿಕಾರ ಹಿಂತೆಗೆದುಕೊಂಡರೆ ದೊಡ್ಡ ಅನಾಹುತವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.
‘ಕನ್ನಡದ ಹೆಸರಲ್ಲಿ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ಸರ್ಕಾರದಿಂದ ₹ 50 ಲಕ್ಷ, ₹ 60 ಲಕ್ಷ ಅನುದಾನ ಏತಕ್ಕೆ ಪಡೆದುಕೊಂಡಿದ್ದಾರೆ? ಇವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ’ ಎಂದರು. ‘ಮರಾಠಾ ಸಮಾಜ ಹಿಂದೂ ಧರ್ಮದ ಉಳಿವಿಗಾಗಿ, ದೇಶಕ್ಕಾಗಿ ಹೋರಾಟ ನಡೆಸಿರುವ ಕ್ಷತ್ರಿಯ ಸಮಾಜವಾಗಿದೆ. ಕಾನೂನಾತ್ಮಕವಾಗಿ ಪ್ರಾಧಿಕಾರಕ್ಕೆ ಇನ್ನೂ ಹೆಚ್ಚಿನ ಸವಲತ್ತು ನೀಡಬೇಕು’ ಎಂದು ಮುಖ್ಯಮಂತ್ರಿಗೆ ಆಗ್ರಹಿಸಿದರು. ಹಿಂದೂ ಸಮಾಜ ಉಳಿಯಲು ಶಿವಾಜಿ ಮಹಾರಾಜ ಕಾರಣರಾಗಿದ್ದಾರೆ ಎಂದು ಹೇಳಿದರು. ಬೆಳಗಾವಿ ವಿಷಯದಲ್ಲಿ ಶಿವಸೇನೆ, ಅಜಿತ್ ಪವಾರ್ ಹೇಳಿಕೆಗೆ ಯಾವತ್ತೂ ನಮ್ಮ ವಿರೋಧವಿದೆ ಎಂದಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

