ಚಿಕ್ಕಬಳ್ಳಾಪುರ: ಕಾರ್ತೀಕ ಮಾಸ ಬಂತೆಂದರೆ ಹಿಂದುಗಳು ಶಿವನ ದೇಗುಲದಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ ಹರಕೆ ತೀರಿಸಿಕೊಳ್ಳುವುದು ವಾಡಿಕೆ.ಆದರೆ ಚಿಕ್ಕಬಳ್ಳಾಪುರದ ಶತಮಾನಗಳ ಇತಿಹಾಸವಿರುವ ಪುರಾಣ ಪ್ರಸಿದ್ದ ನಂದಿಯ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಭಕ್ತಾದಿಗಳು ಕಾರ್ತೀಕ ಮಾಸದ ಸೋಮವಾರ ದೀಪ ಹಚ್ಚಿ ಹರಕೆ ತೀರಿಸಿ ಕೊಳ್ಳುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿರುವುದು ಭಕ್ತಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಶತಮಾನಗಳಿಂದ ಹರಕೆ ಹೊತ್ತಿದ್ದ ಭಕ್ತಾಧಿಗಳು ನಂದಿಯ ಭೋಗ ನಂದೀಶ್ವರ ದೇಗುಲದ ಓಳ ಆವರಣದಲ್ಲಿ ಹಚ್ಚುತ್ತಿದ್ದರು. ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತ ಮತ್ತು ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಓಳ ಆವರಣದಲ್ಲಿ ಹಚ್ಚುವುದಕ್ಕೆ ನಿಷೇಧ ಹೇರಿದಾಗ ದೇವಾಲಯದ ಹೊರ ಆವರಣದಲ್ಲಿ ಕಾರ್ತೀಕ ಮಾಸದ ದೀಪ ಹಚ್ಚುತ್ತಿದ್ದರು ಮತ್ತು ಕಳೆದ ಸೋಮವಾರ ಸಹಾ ಹೊರ ಆವರಣದಲ್ಲಿ ಕಾರ್ತೀಕ ಮಾಸದ ದೀಪ ಹಚ್ಚಿ ತಮ್ಮ ಹರಕೆ ತೀರಿಸಿಕೊಂಡಿದ್ದರು.
ಆದರೇ ಈ ವಾರ ಕರೊನಾದ ನೆಪವೊಡ್ಡಿ ನಿಷೇಧ ಹೇರಿ, ಪೋಲಿಸರ ಬಿಗಿ ಕಾವಲು ಹಾಕಿದ್ದು ನಿಷೇಧದ ವಿಷಯ ತಿಳಿಯದ ಭಕ್ತಾಧಿಗಳು ದೇವಾಲಕ್ಕೆ ಬಂದು ದೀಪ ಹಚ್ಚಿ ತಮ್ಮ ಹರಕೆ ತೀರಿಸಲು ಆಗದೆ ನಿರಾಸೆಯಿಂದ ಆದೇಶ ಹೊರಡಿಸಿರುವ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಾ ಹಿಂದುರುಗುತ್ತಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

