ದೊಡ್ಡಬಳ್ಳಾಪುರ: ನಗರದ ದೇವರಾಜನಗರದಲ್ಲಿರುವ ಭಗವಾನ್ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸಾಯಿಬಾಬಾ ಅವರ 95ನೇ ಹುಟ್ಟುಹಬ್ಬವನ್ನು ಶ್ರದ್ಧಾಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಘಾಟಿ ಕ್ಷೇತ್ರದಲ್ಲಿನ ರಾಷ್ಟ್ರೋತ್ಥಾನ ಗೋಶಾಲೆಯ ಗೋವುಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಸಂಜೆ ಸಾಯಿ ದೀಪಾರಾಧನೆಯೊಂದಿಗೆ ಸತ್ಯಸಾಯಿ ಭಜನೆ ನಡೆಯಿತು. ನಂತರ 40 ಮಂದಿ ಫಲಾನುಭವಿಗಳಿಗೆ ಕಂಬಳಿಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಸೇವಾ ಟ್ರಸ್ಟ್ನ ಅಧ್ಯಕ್ಷ ಸಾಯಿ ಸೇವಾ ಟ್ರಸ್ಟ್ನ ಅಧ್ಯಕ್ಷ ಎ.ಆರ್.ನಾಗರಾಜ್, ಆದ್ಯಾತ್ಮಿಕ ಚಿಂತನೆ ನಮ್ಮ ಬದುಕನ್ನು ಹಸನಾಗಿಸುತ್ತದೆ. ಸಾಮಾಜಿಕ ಮತ್ತು ಆದ್ಯಾತ್ಮಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೇವಾ ಸಮಿತಿ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ಬಾರಿ ಕೊವಿಡ್ ಕಾಣದಿಂದಾಗಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಸಾಯಿ ಸೇವಾ ಟ್ರಸ್ಟ್ನ ಟ್ರಸ್ಟೀ ಎಸ್.ಎಲ್.ರಾಮಚಂದ್ರ, ಸಮಿತಿಯ ಎಂ.ಕೆ.ವಿಶ್ವನಾಥ್, ವಿನಯ್, ಬಿ.ಜೆ.ದೀಪಕ್, ಡಿ.ವಿ.ಭಾರ್ಗವ, ಡಿ.ಆರ್. ಹರ್ಷ, ಜಗನ್ನಾಥ್ ರೆಡ್ಡಿ ಬಿ.ಜೆ.ದೀಪಕ್, ಬಿ.ಎಲ್.ಲಕ್ಷ್ಮೀನಾರಾಯಣ್, ಎಲ್.ಪಾರ್ವತಿ ಶೆಟ್ಟಿ ಹಾಜರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

