ಮಂಗಳೂರು: ಬಿಜೈ ಅಪಾರ್ಟ್‌ಮೆಂಟ್‌ವೊಂದರ ಕೌಂಪೌಂಡ್ ಗೋಡೆಯಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಬರಹ ಬರೆದ ಘಟನೆ ನಡೆದಿದ್ದು, ಚರ್ಚೆಗೆ ಕಾರಣವಾಗಿದೆ.
ಕದ್ರಿ ಬಳಿಯ ಜನನಿಬಿಡ ರಸ್ತೆಯಲ್ಲಿನ ಅಪಾರ್ಟ್ಮೆಂಟ್ ಗೋಡೆಯ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, ಲಷ್ಕರ್ ಜಿಂದಾಬಾದ್ ಎಂದು ಬರೆದಿದ್ದು, ಸಂಘ ಪರಿವಾರದವರೇ ವಿನಾಕಾರಣ ಲಷ್ಕರ್ ಮತ್ತು ತಾಲಿಬಾನ್ ಗಳನ್ನು ಆಮಂತ್ರಿಸುವಂತೆ ಮಾಡಬೇಡಿ (ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ತಾಲಿಬಾನ್ ಆ್ಯಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್ ವಿತ್ ಸಂಘೀಸ್ ಆ್ಯಂಡ್ ಮನ್ವೇದಿಸ್ ) ಎಂದು ಬರೆದಿದ್ದಾರೆ.
ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸಿ ವಿವಾದಿತ ಬರಹದ ಮೇಲೆ ಟರ್ಪಾಲು ಹಾಕಿ, ಪೈಂಟ್ ಬಳೆದಿದ್ದಾರೆ. ಈ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಿಂದು ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

