ಗೌರಿಬಿದನೂರು: ಚಳಿಯಿಂದ ಪಾರಾಗಲು ಕೆಂಡದ ಬಿಸಿ ಹಾಕಿಕೊಂಡಿದ್ದ ಮಲಗಿದ್ದ ವೇಳೆ ಒಂದೇ ಕುಟುಂಬದ ನಾಲ್ವರು ಉಸಿರು ಗಟ್ಟಿ ಅಸ್ವಸ್ಥರಾಗಿ, ಓರ್ವ ಯುವತಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತೊಂಡೆಬಾವಿ ಹೋಬಳಿಯ ಮರಾಠಿ ಪಾಳ್ಯದಲ್ಲಿ ನಡೆದಿದೆ.
ಕೊರಟಗೆರೆ ಮೂಲದ ರಾಮಾಂಜಿನೇಯಲು ಮರಾಠಿ ಪಾಳ್ಯ ಗ್ರಾಮದ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿದ್ದು. ತನ್ನ ಪತ್ನಿ ಶಾಂತಮ್ಮ ಮತ್ತು ಮಕ್ಕಳಾದ ಅರ್ಚನಾ, ಅಂಕಿತಾರೊಂದಿಗೆ ಇಟ್ಟಿಗೆ ಪ್ಯಾಕ್ಟರಿಯವರು ನೀಡಿದ್ದ ಚಿಕ್ಕ ಕೊಠಡಿಯೊಂದರಲ್ಲಿ ವಾಸವಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿವಾರ್ ಸೈಕ್ಲೋನ್ ಪ್ರಭಾವದಿಂದ ಚಳಿಯಿಂದ ರಕ್ಷಿಸಿಕೊಳ್ಳಲು ಕೊಠಡಿಯಲ್ಲಿ ಎಲ್ಲ ಬಾಗಿಲು ಭದ್ರ ಪಡಿಸಿ ಚಳಿ ನಿಗ್ರಹಿಸಲು ಕೆಂಡದ ಬಿಸಿ ಹಾಕಿಕೊಂಡಿದ್ದ ಮಲಗಿದ್ದಾರೆ. ತೀವ್ರವಾಗಿ ಅ ಬೆಂಕಿ ಉರಿದ ಕಾರಣ ಆಮ್ಲಜನಕ ಕೊರತೆಯಾಗಿ ಉಸಿರಾಟದ ತೊಂದರೆಯಾಗಿ ಕುಟುಂಬದ ಹಿರಿಯ ಮಗಳು ಅರ್ಚನಾ(16) ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದವರು ಉಸಿರಾಟದ ತೊಂದರೆಯಿಂದ ಪ್ರಜ್ನೆ ತಪ್ಪಿದ್ದರು ಎನ್ನಲಾಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಾಯುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಮನೆ ಬಾಗಿಲು ಮುರಿದು ಅವರನ್ನು ಗೌರಿಬಿದನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಡೀ ಕುಟುಂಬ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಮೂವರು ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ. ಉಸಿರು ಕಟ್ಟಿ ಸಾವನ್ನಪ್ಪಿರುವ ಅಥವಾ ಸಾಮೂಹಿಕ ಆತ್ಮಹತ್ಯೆ ಶಂಕೆಯನ್ನು ಸ್ಥಳಿಯರು ವ್ಯಕ್ತ ಪಡಿಸುತ್ತಿದ್ದಾರೆ.
ಸ್ಥಳಕ್ಕೆ ಮಂಚೇನಹಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

