ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳ ಜಾರಿ ವಿರೋಧಿಸಿ ಪಂಜಾಬ್ ರೈತರ ದೆಹಲಿ ಚಲೋ ಪ್ರತಿಭಟನಾ ಯಾತ್ರೆ ದೆಹಲಿಗೆ ಬರಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದರೊಂದಿಗೆ ದೆಹಲಿಯಲ್ಲಿ ಶಾಂತಿಯುತ ಪ್ರದರ್ಶನಗಳನ್ನು ನಡೆಸಲು ಕೇಂದ್ರವು ರೈತರಿಗೆ ಅನುಮೋದನೆ ನೀಡಿದೆ.
ದೆಹಲಿ ಚಲೋ ವೇಳೆ ಪ್ರತಿಭಟನೆ ತೀವ್ರಗೊಳಿಸಿದ ರೈತರು ದೆಹಲಿ-ಹರಿಯಾಣದ ಸಿಂಗು ಗಡಿಯಲ್ಲಿ ಕಲ್ಲು ತೂರಿ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.ಈ ವೇಳೆ ಗುಂಪು ಚದುರಿಸಲು ಅಶ್ರುವಾಯು ಸಿಡಿಸಲಾಗಿತ್ತು.
ರೈತ ಸಂಘಟನೆಗಳಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಸಂಸತ್ತಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರೆ ಪೊಲೀಸರು ಅವರನ್ನು ತಡೆಯಬೇಕಾಗುತ್ತದೆ. ಅಲ್ಲದೇ ಶಾಂತಿಯುತ ಪ್ರತಿಭಟನೆ ನಡೆಸುವಂತೆ ದೆಹಲಿ ಪೊಲೀಸ್ ಮುಖ್ಯಸ್ಥರು ಈಗಾಗಲೇ ರೈತರಲ್ಲಿ ಮನವಿಯನ್ನೂ ಮಾಡಿದ್ದಾರೆ.
ಪಂಜಾಬ್‌ನ ರೈತರು ಸಿಂಗು ಗಡಿಯಲ್ಲಿ ಸಭೆ ನಡೆಸುತ್ತಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

