ಬೆಂಗಳೂರು: ಡಿ.6ರಂದು ನಡೆಯ ಬೇಕಿದ್ದ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆಯನ್ನು ತಾತ್ಕಾಲಿಕವಾಗಿ ತಡೆ ನೀಡಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಆದೇಶ ಹೊರಡಿಸಿದ್ದಾರೆ
ಚುನಾವಣೆ ರದ್ದು ಮಾಡುವಂತೆ ಶಿಕ್ಷಕರ ಟಿ.ಶಿವಕುಮಾರ್ ಮತ್ತಿತರರು ನೀಡಿರುವ ಮನವಿಯಂತೆ ಸಂಘದ ಸದಸ್ಯರ ಪಟ್ಟಿ, ಚುನಾವಣೆ ದಿನಾಂಕ, ಸ್ಥಳ, ತಾಲೂಕು ಮಟ್ಟದ ಚುನಾವಣಾಧಿಕಾರಿಗಳ ನೇಮಕದ ಮಾಹಿತಿ ಇಲ್ಲದೆ ಇರುವುದು ಮತ್ತು ಹೊಸ ತಾಲೂಕು ಸೃಜನೆ-ವಿಂಗಡನೆ ಕುರಿತು ಗೊಂದಲಗಳಿದ್ದು. ಈ ಗೊಂದಲ ಬಗೆಹರಿಸಿ, ನಿಯಮಾನುಸಾರ ಪಾರದರ್ಶಕ ಚುನಾವಣೆ ನಡೆಸಲು ನ.23ರಂದು ಹೊರಡಿಸಿದ್ದ ಚುನಾವಣೆ ಅಧಿಸೂಚನೆಯನ್ನು ಸ್ಥಗಿತಗೊಳಿಸಲು ಅರ್ಜಿ ಸಲ್ಲಿಸಿದ್ದರು.
ಇದನ್ನು ಪರಿಶೀಲಿಸಿದ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಅರ್ಜಿಯಲ್ಲಿನ ಅಂಶಗಳು ಮೇಲ್ನೋಟಕ್ಕೆ ಲೋಪದೋಷಗಳನ್ನು ಸರಿಪಡಿಸುವುದು ಅಗತ್ಯವಾಗಿದೆ ಎಂದು ಕಂಡು ಬಂದಿರುವ ಹಿನ್ನಲೆ ತಡೆಯನ್ನು ನೀಡಿದ್ದಾರೆ.
ಅವರು ನೀಡಿರುವ ಆದೇಶದಂತೆ ಚುನಾವಣಾಧಿಕಾರಿ ನ.23 ರಂದು ಹೊರಡಿಸಿದ್ದ ವೇಳಾಪಟ್ಟಿಯಂತೆ ಡಿ.6 ರಂದು ನಡೆಯ ಬೇಕಿದ್ದ ಹಾಗೂ ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆ, ಡಿ.20 ರಂದು ನಿಗದಿಯಾಗಿದ್ದ ರಾಜ್ಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿದು. ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಸೂಚಿಸಿದ್ದಾರೆ.
ಡಿ.6 ರಂದು ನಡೆಯಬೇಕಿದ್ದ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆಯ ಹಿನ್ನೆಲೆ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗಿದ್ದು, ನಾಮ ಪತ್ರ ಸಲ್ಲಿಕೆಗೆ ಇಂದು ಅಂತಿಮ ದಿನವಾಗಿತ್ತು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

