ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆ ಹಣವನ್ನು ಸೋಮವಾರ ಎಣಿಕೆ ಮಾಡಲಾಗಿದೆ.
ಈ ಬಾರಿ ಹುಂಡಿಯಲ್ಲಿ ಒಟ್ಟು 60,56,478 ರೂ ದಾಖಲೆ ಮೊತ್ತ ಸಂಗ್ರಹವಾಗಿದೆ. ಇದರೊಂದಿಗೆ 77,500 ರೂ ಮೌಲ್ಯದ 2 ಕೆಜಿ 350 ಗ್ರಾಂ ಬೆಳ್ಳಿ, 4200 ರೂ ಮೌಲ್ಯದ 2 ಗ್ರಾಂ 500 ಮಿಲಿ ಚಿನ್ನವನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಇಂದು ನಡೆದ ಎಣಿಕೆ ಕಾರ್ಯದಲ್ಲಿ ಕಳೆದ ಹಲವು ತಿಂಗಳಿಂದ ಕಂಡುಬರುತ್ತಿದ್ದ ನಿಷೇಧಿತ ನೋಟು ಹಾಗೂ ವಿದೇಶಿ ನೋಟುಗಳು ಪತ್ತೆಯಾಗಿಲ್ಲದಿರುವುದು ವಿಶೇಷವಾಗಿದೆ.
ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು. ಮುಜರಾಯಿ ತಹಶೀಲ್ದಾರ್ ಜಿ.ಜೆ.ಹೇಮಾವತಿ, ಅಧೀಕ್ಷಕ ರಘುಹುಚ್ಚಪ್ಪ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಗುರುರಾಜಶರ್ಮ, ಇಂಡಿಯನ್ ಓವರ್‍ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

