ಬೆಂಗಳೂರು: ಕರೊನಾ ಸೋಂಕಿನ ಆತಂಕದ ನಡುವೆ ಜ.1ರಿಂದ ಶಾಲೆಗಳನ್ನು ಆರಂಭಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಎರಡನೇ ಹಂತದ ಕರೊನಾ ಅಲೆ ಆತಂಕ ವಿದ್ಯಾರ್ಥಿಗಳ, ಶಿಕ್ಷಕರ ಜವಬ್ದಾರಿ ಶಿಕ್ಷಣ ಇಲಾಖೆಯ ಹೆಗಲಿಗೇರಿದೆ. ಈ ಹಿನ್ನೆಲೆಯಲ್ಲಿ ಯಾವುದೇ ವಿಘ್ನ ಉಂಟಾಗಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕನಕಪುರದ ಕಬ್ಬಾಳಮ್ಮ ದೇವಿಯ ಮೊರೆ ಹೋಗಿದ್ದಾರೆ.
ಈ ಕುರಿತು ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು, ಕನಕಪುರ ತಾಲೂಕಿನಲ್ಲಿರುವ ಶ್ರೀ ಕಬ್ಬಾಳಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಆಶೀರ್ವಾದ ಕೋರಿದೆ.
ಜನವರಿ ಒಂದರಿಂದ ಸುರಕ್ಷಿತ ಕ್ರಮಗಳೊಂದಿಗೆ ಪ್ರಾರಂಭ ವಾಗುತ್ತಿರುವ ರಾಜ್ಯದ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ವಿಘ್ನ ಬಾರದಂತೆ ಮತ್ತು ರಾಜ್ಯದ ಯಾವುದೇ ಮಗುವಿಗೆ ತೊಂದರೆಯಾಗದಂತೆ ದೇವಿಯ ಬಳಿ ಪ್ರಾರ್ಥಿಸಿದ್ದೇನೆ.
ಕಳೆದ ಜೂನ್ – ಜುಲೈ ತಿಂಗಳಲ್ಲಿ ನಡೆಸಿದ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳ ಸಂದರ್ಭದಲ್ಲಿಯೂ ದೇವಿಯ ಆಶೀರ್ವಾದ ಪಡೆದಿದ್ದೆ.
ಸದುದ್ದೇಶ ಮತ್ತು ಸದ್ಭಾವನೆ ಯಿಂದ ಕೈ ಗೊಳ್ಳುತ್ತಿರುವ ಈ ಕಾರ್ಯಕ್ಕೆ ರಾಜ್ಯದ ಸಮಸ್ತ ಜನತೆಯ ಆಶೀರ್ವಾದವನ್ನು ಕೋರುತ್ತಿದ್ದೇನೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

