ಬೆಂಗಳೂರು: ಮಂಗಳವಾರವಷ್ಟೇ ಮೂವರಲ್ಲಿ ದೃಢಪಟ್ಟಿದ್ದ ಹೊಸ ಪ್ರಬೇಧದ ಸೋಂಕು, ಬ್ರಿಟನ್ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರಿಗೆ ದೃಢಪಡುವ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 7ಕ್ಕೇರಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಂಗ್ಲೆಂಡ್ನಿಂದ ಶಿವಮೊಗ್ಗಕ್ಕೆ ಬಂದರನ್ನು ಶಿವಮೊಗ್ಗ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿ ನಾಲ್ವರ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿಕೊಡಲಾಗಿತ್ತು.
ಸೋಂಕಿತರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದೆ ಎಂದು ಬೆಂಗಳೂರಿನ ಲ್ಯಾಬ್ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸದ್ಯ ಸೋಂಕಿತರನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ಕೇಂದ್ರಕ್ಕೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ದೇಶದಾದ್ಯಂತ ಕರೊನಾ ಹೊಸ ಪ್ರಬೇಧದ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಅತಿ ಹೆಚ್ಚು 8 ಪ್ರಕರಣ ಪತ್ತೆಯಾಗಿದೆ. ದೆಹಲಿಯ ಎನ್ಸಿಡಿಸಿ 8, ಹೈದರಾಬಾದ್ನ ಸಿಸಿಎಂಬಿಯಿಂದ 2, ಕೋಲ್ಕತಾದ ಎನ್ಐಬಿಜಿಯಿಂದ 1, ಪುಣೆಯ ಎನ್ಐವಿಯಿಂದ 1 ಮತ್ತು ದೆಹಲಿಯ ಐಜಿಐಬಿಯಿಂದ 1 ಪ್ರಕರಣ ಪತ್ತೆಯಾಗಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

