
ದೊಡ್ಡಬಳ್ಳಾಪುರ: ತಾಲೂಕಿನ ಚನ್ನದೇವಿ ಅಗ್ರಹಾರ, ಹಾಡೋನಹಳ್ಳಿ, ದೊಡ್ಡತುಮಕೂರು, ಸಾಸಲು, ಕಂಟನಕುಂಟೆ ಹಾಗೂ ರಾಜಘಟ್ಟ ಸೇರಿದಂತೆ 6 ಗ್ರಾಮಪಂಚಾಯಿತಿಗಳಿಗೆ ಇಂದು ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆದಿದೆ.
ಚನ್ನದೇವಿ ಅಗ್ರಹಾರ: ಅಧ್ಯಕ್ಷ – ಇಂದಿರಮ್ಮ (ಅವಿರೋಧ ಆಯ್ಕೆ), ಉಪಾಧ್ಯಕ್ಷ ಪ್ರೇಮಕುಮಾರಿ ( ಚುನಾವಣೆ) ಮೂಲಕ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಹಾಡೋನಹಳ್ಳಿ: ಅಧ್ಯಕ್ಷ – ಗೀತಾಬಾಯಿ, ಉಪಾಧ್ಯಕ್ಷ – ಹೆಚ್.ಎ.ನಾಗರಾಜ್. ಜೆಡಿಎಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡತುಮಕೂರು: ಅಧ್ಯಕ್ಷ – ಚೈತ್ರಭಾಸ್ಕರ್, ಉಪಾಧ್ಯಕ್ಷ – ಚೈತ್ರಶ್ರೀಧರ್. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಸಲು: ಅಧ್ಯಕ್ಷ – ಮಾರೇಗೌಡ, ಉಪಾಧ್ಯಕ್ಷ ಎಸ್.ಎನ್. ಆನಂದ್ ಚುನಾವಣೆ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಕಂಟನಕುಂಟೆ: ಅಧ್ಯಕ್ಷ – ಶೋಭರಾಜಗೋಪಾಲ್, ಉಪಾಧ್ಯಕ್ಷ ನಾಗರಾಜ್ (ಚುನಾವಣೆ) ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ರಾಜಘಟ್ಟ: ಅಧ್ಯಕ್ಷ – ರತ್ನಮ್ಮ ಆಂಜನಪ್ಪ (ಅವಿರೋಧ), ಉಪಾಧ್ಯಕ್ಷ – ರಾಮಚಂದ್ರ (ಚುನಾವಣೆ) ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಉಳಿದಂತೆ ಶುಕ್ರವಾರ ತಾಲ್ಲೂಕಿನ 11 ಗ್ರಾಮಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದೆ ಎಂದು ಖಚಿತ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

