
ದೊಡ್ಡಬಳ್ಳಾಪುರ: ಶಾಲೆ, ಕಾಲೇಜು ಸಮಯದಲ್ಲಿ ಹೆಚ್ಚುವರಿ ಬಸ್ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿಯೇ ಸಾರಿಗೆ ಬಸ್ಸನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ನೆಲ್ಲುಕುಂಟೆ ಕ್ರಾಸ್ ಬಳಿ ನಡೆದಿದೆ.
ಹೊಸಹಳ್ಳಿ ಮೂಲಕ ದೊಡ್ಡಬಳ್ಳಾಪುರಕ್ಕೆ ಸಾಗುವ ಸಾರಿಗೆ ಬಸ್ಸಿನಲ್ಲಿ ಸುಮಾರು ಇನ್ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಸಾಗಬೇಕಾದ ಅನಿರ್ವಾರ್ಯತೆ ಇದ್ದು. ಪ್ರತಿ ನಿತ್ಯ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಪ್ರತಿ ನಿತ್ಯದಂತೆ ವಿದ್ಯಾರ್ಥಿಗಳು ಕಾಲೇಜಿಗೆ ಪ್ರಯಾಣಿಸಿದ್ದು, ಬಸ್ ಹತ್ತಲಾಗದೆ ತಾಳ್ಮೆ ಕಳೆದುಕೊಂಡ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿಯೆ ಬಸ್ ನಿಲ್ಲಿಸಿ ಹೆಚ್ಚುವರಿ ಬಸ್ ನೀಡುವಂತೆ ಒತ್ತಾಯಿಸಿದರು.
ಕರೊನಾ ಕಾರಣ ಇತ್ತೀಚೆಗೆ ಬಸ್ ಪ್ರಯಾಣದಲ್ಲಿ ಹೇರಿಕೆಯಾಗಿದ್ದು, ಹೆಚ್ಚುವರಿ ಬಸ್ ಕಳುಹಿಸಲು ಇಲಾಖೆ ಅಗತ್ಯ ಕ್ರಮಕೈಗೊಂಡಿದೆ, ಅಲ್ಲದೆ. ಪ್ರಸ್ತುತ ಹೆಚ್ಚುವರಿ ಬಸ್ ಕಳುಹಿಸಿ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಕೈಗೋಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಡಿಪೋ ಮೂಲಗಳು ಹರಿತಲೇಖನಿ ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

