
ಬೆಂ.ಗ್ರಾ.ಜಿಲ್ಲೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ 2021-22ನೇ ಸಾಲಿಗೆ ಜಿಲ್ಲಾ/ರಾಜ್ಯ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಪ್ರವೇಶಕ್ಕೆ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿರುವ ದಿನಾಂಕ ಮತ್ತು ಸ್ಥಳಗಳನ್ನು ನಿಗದಿಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಮಟ್ಟದಲ್ಲಿ ನಡೆಸಲಾದ ಆಯ್ಕೆ ಪ್ರಕ್ರಿಯೆಯಲ್ಲಿ 8ನೇ ತರಗತಿಗೆ ಕ್ರೀಡಾ ವಸತಿ ನಿಲಯಕ್ಕೆ ಅರ್ಹಗೊಂಡಿರುವ ಕ್ರೀಡಾಪಟುಗಳು ವರದಿ ಮಾಡಿಕೊಳ್ಳುವುದು.
ಚಿಕ್ಕಬಳ್ಳಾಪುರ ಜಿಲ್ಲೆಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ದಿನಾಂಕ 05.02.2021 ರಂದು ಕಿರಿಯರ ವಿಭಾಗ, 06.02.2021 ರಂದು ಹಿರಿಯರ ವಿಭಾಗದ ಅಥ್ಲೆಟಿಕ್ಸ್, ಬ್ಯಾಸ್ಕೆಟ್‍ಬಾಲ್, ಪುಟ್ಬಾಲ್, ಹಾಕಿ ಮತ್ತು ವಾಲಿಬಾಲ್ ಕ್ರೀಡೆಗಳು ಹಾಗೂ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 07.02.2021 ರಂದು ಕಿರಿಯರ ವಿಭಾಗ, 08.02.2021 ರಂದು ಹಿರಿಯರ ವಿಭಾಗದ ಅಥ್ಲೆಟಿಕ್ಸ್, ಈಜು, ಬ್ಯಾಸ್ಕೆಟ್‍ಬಾಲ್, ಪುಟ್ಬಾಲ್, ಜಿಮ್ನಾಸ್ಟಿಕ್, ಹಾಕಿ, ಜುಡೋ, ವಾಲಿಬಾಲ್, ಕುಸ್ತಿ, ಆರ್ಚರಿ, ಫೆನ್ಸಿಂಗ್ ಕ್ರೀಡೆಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8ನೇ ತರಗತಿ ಪ್ರವೇಶಕ್ಕೆ ತಾಲ್ಲೂಕು ಮಟ್ಟದಲ್ಲಿ ಆಯ್ಕೆಗೊಂಡ ಕ್ರೀಡಾಪಟುಗಳು ನೇರವಾಗಿ ಅಥವಾ ಸಂಬಂಧಪಟ್ಟ ಶಾಲೆಯ ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರೊಂದಿಗೆ ನಿಗದಿತ ಅರ್ಜಿ ನಮೂನೆ ಮತ್ತು ಸಂಬಂಧಪಟ್ಟ ದಾಖಲೆಗಳೊಂದಿಗೆ ಹಾಜರಾಗುವುದು.
ಪ್ರಥಮ ಪಿಯುಸಿಗೆ ಕ್ರೀಡಾ ವಸತಿ ನಿಲಯದಲ್ಲಿ ಪ್ರವೇಶ ಪಡೆಯಲು ಇಚ್ಚಿಸುವರು ನೇರವಾಗಿ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು. ಅರ್ಹರಿಗೆ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು.
ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಸಾಮಾನ್ಯ ಬಸ್‍ದರ ನೀಡಲಾಗುವುದು. ಬಸ್ ಟಿಕೇಟ್‍ನ್ನು ಇಲಾಖೆಯಿಂದ ನಿಯೋಜಿಸಿರುವ ಸಿಬ್ಬಂದಿಗೆ ನೀಡತಕ್ಕದ್ದು.
ಆಯ್ಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಶಿಸ್ತಿನಿಂದ ವರ್ತಿಸುವುದು ಮತ್ತು ಕಡ್ಡಾಯವಾಗಿ ಕೋವಿಡ್ ಸೂಚನೆಗಳನ್ನು ಪಾಲಿಸುವುದು. ಮಾಸ್ಕ್ ಧರಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಭವನ, 1ನೇ ಮಹಡಿ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೂ.ಸಂ.: 080-29787443 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

