
ದೊಡ್ಡಬಳ್ಳಾಪುರ: ನಗರದ ಹೆಚ್ಚು ಜನ ಸಂದಣಿ ಇರುವ ದೇವರಾಜ ನಗರದಲ್ಲಿನ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನೇಯ್ಗೆ ಉದ್ಯಮಿ ಕೆ.ಎಂ.ಹನುಮಂತರಾಯಪ್ಪ ಅವರ ಮನೆಯ ಗೇಟ್ ಬಾಗಿಲು ಮುರಿದು ದರೋಡೆ ಕೋರರು ಒಳ ನುಗ್ಗಿರುವ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.
ಮೊದಲಿಗೆ ಮನೆಯ ಆವರಣದಲ್ಲಿ ನಿಲ್ಲಿಸಲಾಗಿರುವ ಬೈಕ್‌ಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ. ಆದರೆ ಎಲ್ಲಾ ಬೈಕ್‌ಗಳಿಗು ಹ್ಯಾಂಡಲ್ ಲಾಕ್ ಮಾಡಿದ್ದರಿಂದ ಸಾಧ್ಯವಾಗಿಲ್ಲ. ಇನೋವಾ ಕಾರಿನಲ್ಲಿ ಬಂದಿರುವ ಕಳ್ಳರು ಮನೆಯ ಗೇಟ್ ಬಾಗಿನಲ್ಲೇ ಕಾರು ನಿಲ್ಲಿಸಿದ್ದಾರೆ. ಕಾರಿನ ನಂಬರ್ ಪ್ಲೇಟ್ ಕಾಣಿಸಿದಂತೆ ಹೂವಿನ ಹಾರಗಳನ್ನು ನೇತುಹಾಕಿದ್ದಾರೆ. ಬಾಗಿಲು ಮುರಿದು ಒಳ ನುಗ್ಗುವಷ್ಟರಲ್ಲಿ ಇದೇ ರಸ್ತೆಯಲ್ಲಿ ಯಾರೋ ಬಂದಿರುವ ಕಾರಣದಿಂದಾಗಿ ಕಾರು ಹತ್ತಿ ಪರಾರಿಯಾಗಿದ್ದಾರೆ. ಕಾರು ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯ ಇದೇ ರಸ್ತೆಯ ಇತರೆ ಮನೆಗಳ ಮುಂದೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಗಳಲ್ಲೂ ಸೆರೆಯಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

