
ಬೆಂ.ಗ್ರಾ.ಜಿಲ್ಲೆ: ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಅತಿ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (PM-FME) ಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಹೊಸ ಉದ್ದಿಮೆ ಸ್ಥಾಪಿಸಲು/ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ಅವಕಾಶವಿದ್ದು, “ಒಂದು ಜಿಲ್ಲೆ ಒಂದು ಉತ್ಪನ್ನ” ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೋಳಿ ಉತ್ಪನ್ನಗಳ ಘಟಕಗಳು, ಬ್ರ್ಯಾಡಿಂಗ್, ಲೇಬಲಿಂಗ್ ಮಾರುಕಟ್ಟೆ ಬೆಂಬಲ ಮತ್ತು ರಫ್ತಿಗೆ ಪ್ರೋತ್ಸಾಹ ನೀಡಿ ಅಂತಹ ವ್ಯಕ್ತಿ/ ಸಂಸ್ಥೆಗಳನ್ನು ಉದ್ದಿಮೆದಾರರಾಗಿ ರೂಪಿಸಲು ಯೋಜಿಸಲಾಗಿದೆ.ಇಂತಹ ಸಂಸ್ಕರಣಾ ಘಟಕಗಳು, ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವ ಸಣ್ಣ ಉದ್ಯಮದಾರರಿಗೆ ಸಹಾಯಧನವನ್ನು ನೀಡಲಾಗುವುದು.
ಈ ಯೋಜನೆಯು 2020-21ರಿಂದ ಪ್ರಾರಂಭವಾಗಿ 2024-25ರವರಿಗೆ ಅನುಷ್ಠಾನಗೊಳ್ಳಲಿದ್ದು, ಅಗತ್ಯ ತಾಂತ್ರಿಕ ಹಾಗೂ ಸಂಶೋಧನಾ ಬೆಂಬಲವನ್ನು ಕೇಂದ್ರೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಮೈಸೂರು ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಗಳ ನೆರವನ್ನು ಫಲಾನುಭವಿಗಳಿಗೆ ನೀಡಲಾಗುವುದು.
ನೋಂದಣಿಗೆ ಮಾನದಂಡ: ಸ್ವತಃ ಆಹಾರ ಸಂಸ್ಕರಣಾ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಉನ್ನತೀಕರಿಸಲು ಸ್ಥಾಪಿಸಲು ಉದ್ದೇಶಿಸಿರುವ ಫಲಾನುಭವಿಗಳು ಅರ್ಜಿಯನ್ನು ನೊಂದಾಯಿಸಬಹುದಾಗಿರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಒಂದು ಜಿಲ್ಲೆ ಒಂದು ಉತ್ಪನ್ನ” ಆಯ್ಕೆಯಾಗಿರುವ ಕೋಳಿ ಉತ್ಪನ್ನಗಳ ಸಂಸ್ಕರಣೆಯ ಹೊಸ ಘಟಕಗಳಿಗೆ ಆದ್ಯತೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯವರಾಗಿರಬೇಕು. ಅರ್ಜಿದಾರರು ಉದ್ಯಮದ ಮಾಲೀಕತ್ವ ಹೊಂದಿರಬೇಕು. ಉದ್ಯಮವು ಮಾಲೀಕತ್ವ/ಪಾಲುದಾರಿಕೆ ಸಂಸ್ಥೆಯಾಗಿರಬೇಕು. ಅರ್ಜಿದಾರರು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು 8ನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಅಸಂಘಟಿತವಾಗಿರಬೇಕು ಮತ್ತು10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರಬೇಕು. ಒಂದು ಕುಟುಂಬದಿಂದ ಕೇವಲ ಒಬ್ಬ ವ್ಯಕ್ತಿಗೆ ಅವಕಾಶವಿರುತ್ತದೆ. ಯೋಜನಾ ವೆಚ್ಚ ಹಾಲಿ ವಹಿವಾಟುಗಿಂತ ಹೆಚ್ಚಿರಬಾರದು. ಸ್ವ-ಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುವುದು. ಉತ್ಪನ್ನ ನಿರ್ವಹಣೆಯಲ್ಲಿ ಕನಿಷ್ಠ 3 ವರ್ಷಗಳ ಜ್ಞಾನ ಮತ್ತು ಅನುಭವ ಇರಬೇಕು.
ಯೋಜನೆಯ ಬೆಂಬಲ/ಸಹಾಯಧನ: ವೈಯಕ್ತಿಕ/ವ್ಯಕ್ತಿಗತ ಅತಿ ಸಣ್ಣ ಉದ್ದಿಮೆಗಳಿಗೆ ಬೆಂಬಲ ಯೋಜನಾ ವೆಚ್ಚದ ಶೇಕಡಾ 35ರಷ್ಟು ಮೌಲ್ಯದ ಸಾಲ ಸಂಪರ್ಕವಿರುವ ಸಹಾಯಧನ ರೂ. 10.00 ಲಕ್ಷದ ಗರಿಷ್ಟ ಮಿತಿ, ಫಲಾನುಭವಿ ಕೊಡುಗೆ ಕನಿಷ್ಟ ಶೇ. 10% ರಷ್ಟಿರಬೇಕು, ಬಾಕಿ ಬ್ಯಾಂಕಿನ ಸಾಲ.
ರೈತ ಉತ್ಪಾದಕ ಸಂಸ್ಥೆಗಳು (FPOs) ಉತ್ಪಾದಕ ಸೊಸೈಟಿ ಗಳಿಗೆ ಸಹಾಯಧನ: ಯೋಜನಾ ವೆಚ್ಚದ ಶೇಕಡಾ 35% ರಷ್ಟು ಮೌಲ್ಯದ ಸಾಲ ಸಂಪರ್ಕವಿರುವ ಸಹಾಯಧನ, ಪ್ರತಿ ಸಂಸ್ಥೆಗೆ ರೂ.10.00 ಲಕ್ಷದ ಗರಿಷ್ಟ ಮಿತಿ, ಸಂಘದ ಕೊಡುಗೆ ಕನಿಷ್ಟ ಶೇ. 10% ರಷ್ಟಿರಬೇಕು, ಬಾಕಿ ಬ್ಯಾಂಕಿನ ಸಾಲ ತರಬೇತಿಗೆ ಬೆಂಬಲ.
ನೋಂದಣಿ ವಿಧಾನ: ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಅವಶ್ಯವಾದ ತರಬೇತಿ ಡಿಪಿಆರ್ ತಯಾರಿಕೆ ಬ್ಯಾಂಕ್ ಸಾಲ, ಮಾರುಕಟ್ಟೆ ಬೆಂಬಲ, ಕೈ ಆಸರೆ ಬೆಂಬಲ, ಜಿ.ಎಸ್.ಟಿ ಉದ್ಯೋಗ್ ಆಧಾರ್, ಎಫ್.ಎಸ್.ಎಸ್.ಐ. ಪ್ರಮಾಣಪತ್ರಗಳನ್ನು ದೊರಕಿಸಿಕೊಡಲು ತಿರುಮಲೇಶ್ ಮೊಬೈಲ್ ಸಂಖ್ಯೆ: 9739868651 ಮತ್ತು ಡಾ. ಜಯಂತ್ ದೇಶಪಾಂಡೆ ಮೊಬೈಲ್ ಸಂಖ್ಯೆ: 9986117775 ಇವರನ್ನು ನೋಂದಣಿ ಮತ್ತು ಯೋಜನಾ ವರದಿಯ ಸಿದ್ಧತೆಗೆ ಸಂಪರ್ಕಿಸಬಹುದಾಗಿದೆ.
ಆಸಕ್ತ ವೈಯಕ್ತಿಕ ಫಲಾನುಭವಿಗಳು, ಸಂಘ ಸಂಸ್ಥೆಗಳು ಎಫ್.ಒ.ಓ.ಗಳು ಸ್ವ ಸಹಾಯ ಗುಂಪುಗಳ ಸದಸ್ಯರು, ಒಕ್ಕೂಟಗಳು, ಸಹಕಾರಿ ಸಂಸ್ಥೆಗಳು, ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ತಿರುಮಲೇಶ್ ಮೊಬೈಲ್ ಸಂಖ್ಯೆ: 9739868651 ಮತ್ತು ಡಾ. ಜಯಂತ್ ದೇಶಪಾಂಡೆ ಮೊಬೈಲ್ ಸಂಖ್ಯೆ: 9986117775 ಇವರನ್ನು ನೋಂದಣಿ ಮತ್ತು ಯೋಜನಾ ವರದಿಯ ಸಿದ್ಧತೆಗೆ ಸಂಪರ್ಕಿಸಬಹುದಾಗಿದೆ.
ಆಸಕ್ತ ಫಲಾನುಭವಿಗಳು ತಮ್ಮ ಘಟಕಗಳ ಕುರಿತು ಯೋಜನಾ ವರದಿಗಳನ್ನು ತಯಾರಿಸಬೇಕಾಗಿರುತ್ತದೆ, ಯೋಜನಾ ವರದಿಗಳ ಅನುಮೋದನೆ ನಂತರ ಕೇಂದ್ರ ಸರ್ಕಾರದ ಪೋರ್ಟಲ್: PMFME website link : http//pmfme.mofpi.gov.in, PMFME MIS website link : http//pmfme.mofpi.gov.in/mis ಇಲ್ಲಿ ಅರ್ಜಿಗಳನ್ನು ನೋಂದಾಯಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸರ್ಕಾರದ PMFME website ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಮಥುರಾ ಎಸ್ .ಪೈ., ಸಹಾಯಕ ಕೃಷಿ ನಿರ್ದೇಶಕರು( ರೈತ ಮಹಿಳೆ) ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಬನಶಂಕರಿ, ಬೆಂಗಳೂರು ಮೊಬೈಲ್ ಸಂಖ್ಯೆ: 8277929923 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರಿನ ಜಂಟಿ ಕೃಷಿ ನಿರ್ದೇಶಕರಾದ ಜಿ.ಎಸ್.ಜಯಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

