
ಬೆಂಗಳೂರು: ರಾಜ್ಯ ಸರ್ಕಾರದ 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ದೊಡ್ಡಬಳ್ಳಾಪುರ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಎಂ.ಬಿ.ನವೀನ್ ಕುಮಾರ್ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿತರಿಸಿದರು.
ಸೋಮವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಬಿ.ನವೀನ್ ಕುಮಾರ್ ಅವರಿಗೆ ಪದಕ ವಿತರಣೆ ಮಾಡಿ, ಪ್ರಶಂಸಿಸಲಾಯಿತು.
ಇಡೀ ದೇಶದ ಗಮನ ಸೆಳೆದಿದ್ದ ಡ್ರೀಮ್ಸ್ ಇನ್ ಫ್ರಾ ಟಿಜಿಎಸ್ ಗೃಹ ಕಲ್ಯಾಣ್ ಪ್ರಕರಣದ ರೂ1,400 ಕೋಟಿ ಹಗರಣ, ಅಪಾರ್ಟ್ ಮೆಂಟ್ಸ್ಗಳ ಬಹು ಕೋಟಿ ಹಗರಣದ ಪ್ರಮುಖ ರೂವಾರಿಯಾಗಿದ್ದ ದಿಶಾಚೌಧರಿ, ರಾಯಚೂರು ಜಿಲ್ಲೆಯ ಸಿಂಧನೂರಿನ ನಕಲಿ ಭತ್ತದ ಗೋದಾಮುಗಳ ರೂ25 ಕೋಟಿ ಹಗರಣ ಹಾಗೂ 4 ವರ್ಷಗಳ ಕಾಲ ಸಿಬಿಐ,ಸಿಐಡಿ ಇಂಟಲಿಜೆನ್ಸ್ ಕೈಗೂ ಸಹ ಸಿಗದೆ ತಪ್ಪಿಸಿಕೊಂಡಿದ್ದ ಇಂಟರ್ ಪೋಲ್ ರೆಡ್ಕಾರ್ನರ್ ಆರೋಪಿ ಅಲೆಕ್ಸಾಂಡರ್ ಬ್ರೂನೊ ವೆಹ್ನೆಲ್ಟ್ ಎಂಬಾತನನ್ನು ಬಂಧಿಸುವಲ್ಲಿ ತೋರಿರುವ ಸಾಧನೆಗಳಿಗಾಗಿ ಎಂ.ಬಿ.ನವೀನ್ ಕುಮಾರ್ ಅವರಿಗೆ ಮುಖ್ಯಮಂತ್ರಿಗಳ ಪದಕ ಪುರಸ್ಕಾರ ನೀಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

