ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ: ಜನರ ಅಲೆದಾಟ ತಪ್ಪಿಸಲು ಸರ್ಕಾರವೇ ಜನರ ಬಾಗಿಲಿಗೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿಕ್ಕಬಳ್ಳಾಪುರ: ಜನರ ಅಲೆದಾಟ ತಪ್ಪಿಸಲು ವಿನೂತನ ಕಾರ್ಯಕ್ರಮವನ್ನು ರೂಪಿಸಿ, ಸರ್ಕಾರವನ್ನೇ ಮನೆಬಾಗಿಲಿಗೆ ತಲುಪಿಸಲಾಗಿದೆ ಎಂದು ಮುಖ್ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಇಲಾಖೆಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಣ್ಣ ದಾಖಲೆಗಳಿಗೂ ಅಲೆದಾಟ, ಜಾತಿ ಪ್ರಮಾಣ ಪತ್ರ, ಆರ್.ಟಿ.ಸಿ ಮುಂತಾದವುಗಳಿಗೆ ಬಡವರೇ ಓಡಾಡುತ್ತಾರೆ. ಬಡವರು ಅಲೆದಾಟ ತಪ್ಪಿಸಲು ಕಂದಾಯ ಸಚಿವ ಆರ್.ಅಶೋಕ್ ಉತ್ತಮ ಯೋಜನೆ ರೂಪಿಸಿದ್ದಾರೆ ಎಂದರು. 

ಕೋಲಾರ, ಚಿಕ್ಕಬಳ್ಳಾಪುರದ ರೈತರು ಶ್ರಮಜೀವಿಗಳು. ರೇಷ್ಮೆ, ಹಾಲು ಮತ್ತು ಹಣ್ಣುಹಂಪಲುಗಳಿಗೆ ಖ್ಯಾತಿ ಪಡೆದಿರುವ ಜಿಲ್ಲೆ ಇದು. ಮನೆ ಮನೆಗೆ ಕಂದಾಯ ದಾಖಲೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಇಂದು ಜಾರಿಗೊಳಿಸಿದೆ ಎಂದರು.

ತಮ್ಮ ಉದ್ದಾರ ಮಾಡಿಕೊಂಡ ಕಾಂಗ್ರೆಸ್: ಸರ್ಕಾರ ಜನರ ಪಾಲಿಗೆ ಜೀವಂತವಾಗಿದೆಯೇ ಎನ್ನುವುದು ಜನರಿಗೆ ಸಂಕಷ್ಟ ಬಂದಾಗ ಅವರಿಗೆ ಪರಿಹಾರ, ಮನೆ  ಬಾಗಿಲಿಗೆ ಹೋದಾಗ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಬಡತನ, ರೈತರು, ದೀನದಲಿತರು ಹಿಂದುಳಿದ ವರ್ಗದವರು ಇವರುಗಳ  ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಅವರೆಲ್ಲಾ ಉದ್ಧಾರವಾಗಿದ್ದರೆ ನಾವು ಇಂದು ಕಂದಾಯ ದಾಖಲೆಗಳನ್ನು  ಕೊಡುವುದಕ್ಕೆ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ನಡೆದಿದೆ. ಬಡವರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡರು. ನಿಮ್ಮನ್ನು ಉದ್ಧಾರ ಮಾಡುತ್ತೇವೆ ಎಂದು ತಮ್ಮ ಉದ್ದಾರವನ್ನು ಮಾಡಿಕೊಂಡಿದ್ದಾರೆ.  ಎಲ್ಲಿಯವರೆಗೆ ಇದು ನಡೆಯುತ್ತದೆ? ಜನರು ಜಾಗೃತರಾದಾಗ ಇವೆಲ್ಲವೂ ನಿಲ್ಲುತ್ತದೆ ಎಂದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಬಹಳ ದೊಡ್ಡ ಕೆಲಸವೆಂದರೆ ಜನರ ಹಕ್ಕುಗಳ ಬಗ್ಗೆ  ಜಾಗೃತಿ ಮೂಡಿಸಿದ್ದಾರೆ. ಜನರನ್ನು ಶಿಕ್ಷಿತರನ್ನಾಗಿಸಿ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು  ಸ್ವತಂತ್ರ ನಂತರದ ಭಾರತದಲ್ಲಿ ಮಾಡಿರುವ ಏಕೈಕ ಪ್ರಧಾನಮಂತ್ರಿಗಳು ಎಂದರು.

ಅಧಿಕಾರಕ್ಕಾಗಿ ರಾಜಕಾರಣ: ಹಿಂದೆಯೂ ಸರ್ಕಾರಗಳಿದ್ದವು. ಗರೀಬಿ ಹಟಾವೋ ಎಂದರು. ಏಕೆ ಮಾಡಲಿಲ್ಲ? ಅಧಿಕಾರಕ್ಕಾಗಿ ರಾಜಕಾರಣ, ಜನಸೇವೆಗಾಗಿ ರಾಜಕಾರಣ. ಇದುವರೆಗೂ ಅವರು ಮಾಡಿರುವುದು ಅಧಿಕಾರಕ್ಕಾಗಿ ರಾಜಕಾರಣ. ಅಧಿಕಾರವೇ ಅವರಿಗೆ ಕೇಂದ್ರಬಿಂದು. ನಾವು ಮನೆಬಾಗಿಲಿಗೆ ಸೌಲಭ್ಯಗಳನ್ನು ಮುಟ್ಟಿಸಿ, ಅವರ ಆಶೀರ್ವಾದದೊಂದಿಗೆ ಮತ್ತೆ ಜನಸೇವೆಗೆ ಮುಂದಾಗಲಿದ್ದೇವೆ.

ಕಂದಾಯ ಇಲಾಖೆಯು 5 ಕೋಟಿ ಜನರಿಗೆ ಇಂದೇ ಮುಟ್ಟಿಸುತ್ತಿದ್ದಾರೆ.  ದಾಖಲೆಗಳನ್ನು  ಸರಿಯಿದೆಯೇ ಎಂದು ಖಾತ್ರಿ ಮಾಡಿಕೊಂಡು ಮನೆ ಬಾಗಿಲಿಗೆ ತಲುಪಿಸಿದೆ.  ಇದನ್ನು ಹಿಂದಿನ ಸರ್ಕಾರ ಏಕೆ ಮಾಡಿಲ್ಲ?ಎಂದು ಪ್ರಶ್ನಿಸಿದರು.

ಜನಸಾಮಾನ್ಯನ ಸರ್ಕಾರ: ಇದು ಜನಸಾಮಾನ್ಯನ ಸರ್ಕಾರ. ಇನ್ನುಳಿದವು ಅಧಿಕಾರದ ಸರ್ಕಾರ. ಈ ಬಾರಿ ಬಜೆಟ್ ನಲ್ಲಿ ರೈತರ ಯಂತ್ರೋಪಕರಣಕ್ಕಾಗಿ 5 ಎಕರೆಗೆ  1050 ರೂ.ಗಳನ್ನು ಡೀಸಲ್ ಖರ್ಚಿಗಾಗಿ ರೈತ ಶಕ್ತಿ ಯೋಜನೆ ರೂಪಿಸಿದ್ದು,  600 ಕೋಟಿ ರೂ.ಗಳನ್ನು ಮೀಸಲಿರಿಸಿದೆ. 300 ಕೋಟಿ ರೂ.ಗಳನ್ನು ಯಶಸ್ವಿನಿ ಯೋಜನೆಗೆ ಮೀಸಲಿರಿಸಿ ಯೋಜನೆಯನ್ನು ಪುನಃ ಜಾರಿ ಮಾಡಲಾಗಿದೆ. 33 ಲಕ್ಷ ರೈತರಿಗೆ  ಬಡ್ಡಿ ರಹಿತ ಸಾಲವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ. 10 ಲಕ್ಷ ಕ್ಕೂ ಅಧಿಕ ರೈತರಿಗೆ ಒಂದೇ ವರ್ಷದಲ್ಲಿ ಸಾಲ ನೀಡಲಾಗುವುದು. ಈ ಪೈಕಿ  3 ಲಕ್ಷ ಹೊಸ ರೈತರು ಸಾಲ ಪಡೆದಿದ್ದಾರೆ. ರೈತರ ಬೆಳೆಗಳಿಗೆ ಬ್ರಾಂಡಿಂಗ್ ಹಾಗೂ ರಫ್ತಿಗಾಗಿ  ಕೆಪಾಕ್ಸ್ ಸಂಸ್ಥೆಯ ಮೂಲಕ ಜಾರಿಗೊಳಿಸಲು ವಿಶೇಷ ಅನುದಾನವನ್ನು ನೀಡಲಾಗಿದೆ. ಪಂಪ್‍ಸೆಟ್‍ಗಳಿಗೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ತೋಟಗಾರಿಕಾ ಬೆಳಿಗಳಿಗೆ ಸಬ್ಸಿಡಿಯನ್ನು ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ರೈತರ ಶ್ರಮಕ್ಕೆ, ಕಾರ್ಮಿಕರ ಬೆವರಿಗೆ ಬೆಲೆ ಸಿಗಬೇಕು ಎನ್ನುವುದೇ ನಮ್ಮ ಸಂಕಲ್ಪ. ಅದಕ್ಕಾಗಿ ನಾನು ಪ್ರಮಾಣವಚನ ತೆಗೆದುಕೊಂಡ 3 ಗಂಟೆಗಳೊಳಗಾಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಘೋಷಿಸಲಾಯಿತು.  50 ಲಕ್ಷ ಕುಟುಂಬಗಳಿಗೆ ಮಾಶಾಸನ ಹೆಚ್ಚಿಸಲಾಗಿದೆ. ಬಡವರ ಬಗ್ಗೆ ಕಳಕಳಿಯಿರುವ ಸರ್ಕಾರ ನಮ್ಮದು.

ಕೋವಿಡ್ ಪ್ರವಾಹ ಬಂದಿರುವುದರಿಂದ  ನರೇಂದ್ರ ಮೋದಿಯವರು ಒಣಬೇಸಾಯಕ್ಕೆ ಒಂದು ಹೆಕ್ಟೇರಿಗೆ 6300 ರೂ.ಗಳನ್ನು ನೀಡಿದ್ದಾರೆ. ರೈತರಿಗೆ ರೂ. 6300 ನೀಡಿ ಎರಡರಷ್ಟು  ಬೆಳೆ ಪರಿಹಾರ ನೀಡಿದ್ದೇವೆ. ನೀರಾವರಿಗೆ 25000 ರೂ.ಗಳನ್ನು,  ತೋಟಗಾರಿಕೆಗೆ ರೂ.28000 ನೀಡಲಾಗಿದೆ.  ದುಪ್ಪಟ್ಟು ಪರಿಹಾರ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಒಂದೇ ತಿಂಗಳಲ್ಲಿ ಪರಿಹಾರದ ಮೊತ್ತ ರೈತರ ಖಾತೆಗಳಿಗೆ ಮೊತ್ತ ಜಮಾ ಆಗಿದೆ ಎಂದರು.

ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಧಾನ ಪರಿಷತ್ ಸದಸ್ಯ Dr.ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ ಸೇರಿದಂತೆ ಸ್ಥಳೀಯ ಮುಖಂಡರುಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

“ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ

[ccc_my_favorite_select_button post_id="121560"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]