ದೊಡ್ಡಬಳ್ಳಾಪುರ, (ಅ.26): ಮೂರು ದಶಕಗಳ ನಂತರ ಮಧುರೆ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಕೆರೆಯ ಏರಿಯ ಮೇಲಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಭಿಷೇಕ ನಡೆಸಲಾಯಿತು.

ನಂತರ ಬೆಳ್ಳಿರಥದಲ್ಲಿ ಶನಿಮಹಾತ್ಮ, ಆಂಜನೇಯಸ್ವಾಮಿ ಮೆರವಣಿಗೆ ಮೂಲಕ ಸಾಗಲಾಯಿತು. ಈ ವೇಳೆ ವೀರಗಾಸೆ ಕುಣಿತ ಗಮನ ಸೆಳೆಯಿತು.

ನಂತರ ಮೂವತ್ತು ವರ್ಷಗಳ ನಂತರ ತುಂಬಿ ಹರಿದ ಕೆರೆ ಪೂಜೆ ಸಲ್ಲಿಸಿ, ಶನಿಮಹಾತ್ಮ, ಆಂಜನೇಯಸ್ವಾಮಿ ಉತ್ಸವ ಮೂರ್ತಿಗಳ ಅದ್ಧೂರಿ ತೆಪ್ಪೋತ್ಸವ ನಡೆಸಲಾಯಿತು.
ಶಾಸಕ ಟಿ.ವೆಂಕಟರಮಣಯ್ಯ ಮತ್ತು ಅವರ ಪತ್ನಿ ವರಲಕ್ಷ್ಮಮ್ಮ ಕೆರೆಗೆ ಪೂಜೆ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಚುಂಚೇಗೌಡ, ತಾಪಂ ಮಾಜಿ ಅಧ್ಯಕ್ಷೆ ಚೆನ್ನಮ್ಮ ರಾಮಲಿಂಗಯ್ಯ, ಕನಸವಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರಭು, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಟಿ.ರಾಮಣ್ಣ, ಮಲ್ಲೋಹಳ್ಳಿ ಪುನೀತ್ ಗೌಡ, ಪ್ರಭ, ಕಿರಣ್ ವಿ.ಗೌಡ, ಆರ್.ವಿ.ಗೌಡ ಸೇರಿದಂತೆ ಸಾವಿರಾರು ಮಂದಿ ಹಾಜರಿದ್ದರು.
ತೆಪ್ಪೋತ್ಸವದ ವೇಳೆ ಪಟಾಕಿ ಸಿಡಿಸಲಾಯಿತು. ಸಾವಿರಾರು ಮಂದಿ ಕೆರೆಯ ಕಟ್ಟೆಯ ಮೇಲೆ ನಿಂತು ತೆಪ್ಪೋತ್ಸವ ಕಣ್ತುಂಬಿಕೊಂಡರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
