ದೊಡ್ಡಬಳ್ಳಾಪುರ, (ಅ.26): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ನೆನಪು ಮಾತ್ರ. ಜೊತೆಗೆ ಇರದ ಜೀವ ಎಂದಿಗೂ ಜೀವಂತ ಎನ್ನುವ ಹಾಗೆ ಪುನೀತ್ ನಮ್ಮನ್ನು ಆಗಲಿ ವರ್ಷ ಆಗುತ್ತಿದ್ದರು ಅವರ ನೆನಪು ಮಾತ್ರ ಅಜರಾಮರ.
ಅಪ್ಪು ಅವರನ್ನು ಕಳೆದುಕೊಂಡು ಇದೇ ತಿಂಗಳ 29 ಕ್ಕೆ ವರ್ಷ ಕಳೆಯಲಿದೆ. ಅಲ್ಲದೆ ಕಳೆದ ವರ್ಷ ಇದೇ ದಿನ ಅಕ್ಟೋಬರ್ 26 ರಂದು ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪುನೀತ್ ಅವರು ಪತ್ನಿ ಅಶ್ವಿನಿ ಅವರೊಂದಿಗೆ ಭೇಟಿ ನೀಡಿದ್ದರು.
ಈ ಹಿನ್ನಲೆಯಲ್ಲಿ ಇಂದು ಗಂಧದ ಗುಡಿ ಚಿತ್ರ ಯಶಸ್ವಿಯಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಪರಿಸರವಾದಿ ಕೆ.ಗುರುದೇವ್, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಚೌಡರಾಜ್, ಅಭಿಮಾನಿಗಳಾದ ಪುಟ್ಟರಾಜ್, ಕೆಂಪರಾಜ್, ವರ್ತಕ ಶ್ರೀನಿವಾಸ್, ನವೀನ್ ಕುಮಾರ್ ಮತ್ತಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

